ಮೊಬೈಲ್ ನಿರೀಕ್ಷೆಯಲ್ಲಿದ್ದ ಇವರಿಗೆ ಪಾರ್ಸೆಲ್ ಬಾಕ್ಸ್​​ನಲ್ಲಿ ಸಿಕ್ಕಿದ್ದು ಸೋಂಪಾಪುಡಿ

ಮೊಬೈಲ್ ನಿರೀಕ್ಷೆಯಲ್ಲಿದ್ದ ಇವರಿಗೆ ಪಾರ್ಸೆಲ್ ಬಾಕ್ಸ್​​ನಲ್ಲಿ ಸಿಕ್ಕಿದ್ದು ಸೋಂಪಾಪುಡಿ

ಚಿಕ್ಕಮಗಳೂರು: ಜಿಲ್ಲೆಯ ಮುಗುವಳ್ಳಿ ತಾಲೂಕಿನ ಐದರಿಂದ ಆರು ಜನ್ರಿಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ನಿಮ್ಮ ನಂಬರ್​ಗಳು ಲಕ್ಕಿ ಡ್ರಾ ಒಂದರಲ್ಲಿ ಸೆಲೆಕ್ಟ್ ಆಗಿದೆ. ನಿಮಗೆ ಫೋನ್ ಕಳುಹಿಸುತ್ತೇವೆ ಅಂತ ಫೋನ್ ಮೂಲಕ ಹೇಳಿದ್ದಾರೆ.

ಇದನ್ನೇ ನಂಬಿದ ಗಾಯತ್ರಿ ಎಂಬುವವರಿಗೆ ಪೋಸ್ಟ್ ಮೂಲಕ ಪಾರ್ಸೆಲ್ ಒಂದು ಬಂದಿದೆ. ಹೇಗೋ ಪಾರ್ಸೆಲ್ ಬಂತು ಅಂತ 1,500 ರೂ ಕೊಟ್ಟು ಬಿಡಿಸಿಕೊಂಡು ಓಪನ್ ಮಾಡಿದಾಗ ಅವರಿಗೆ ಶಾಕ್ ಕಾದಿತ್ತು. ಯಾಕಂದ್ರೆ ಪಾರ್ಸೆಲ್ ಬಾಕ್ಸ್​ನಲ್ಲಿ ಇದ್ದಿದ್ದು ಫೋನ್​ ಅಲ್ಲ.. ಸೋಂಪಾಪುಡಿ ಪ್ಯಾಕೆಟ್.

ಇದನ್ನೂ ಓದಿ: ನೋಡನೋಡುತ್ತಲೇ ಪ್ರಪಾತಕ್ಕೆ ಉರುಳಿದ ಕಾರ್.. ಮಹಿಳೆಯರ ಮುಂದೆಯೇ ನಡೀತು ಪವಾಡ

ಸೋಂಪಾಪುಡಿ ನೋಡಿ ಪುಲ್ ಶಾಕ್ ಆದವರು ಈ ಹಿಂದೆ ನಿಮ್ಮ ಸೆಲೆಕ್ಟ್ ಆಗಿದೆ ಅಂತ ಹೇಳಿದ್ದವರಿಗೆ ಪೋನ್ ಮಾಡಿದಾಗ ಎಲ್ಲೋ ಮಿಸ್ ಅಗಿರಬೇಕು ಅಂದಿದ್ರಂತೆ. ಅಮೇಲೆ ಪೋನ್ ಮಾಡಿದ್ರೆ ಸ್ವಿಚ್ ಅಫ್ ಬರ್ತಿದೆಯಂತೆ. ಇವರಿಗೆ ಮಾತ್ರವಲ್ಲ ಈ ಊರಿನ 5 ರಿಂದ 6 ಮಂದಿಗೆ ಇದೇ ರೀತಿ ಟೋಪಿ ಹಾಕಲಾಗಿದೆ.. ಅದ್ರೆ ಯಾರೊಬ್ರು ಮಾತ್ರ ದೂರು ನೀಡಿಲ್ಲ.

ಇದನ್ನೂ ಓದಿ: 78 ರ ವಯಸ್ಸಿನಲ್ಲೂ ಅದ್ಭುತ ಡ್ಯಾನ್ಸ್; ಕೊನೆಗೂ ಬಾಲ್ಯದ ಕನಸು ನನಸು ಮಾಡಿಕೊಂಡ ಅಜ್ಜಿ

ಒಟ್ಟಾರೆ, ಒಂದೇ ಗ್ರಾಮದಲ್ಲಿ ಈ ರೀತಿ ಪೋನ್ ಮಾಡಿ ಮೊಬೈಲ್ ಕೊಡ್ತೀವಿ ಅಂತ ಮೋಸಮಾಡಿದ ವ್ಯಕ್ತಿ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ನಾವೇನೋ ಮೋಸ ಹೋದ್ವಿ.. ಬೇರೆಯವರು ಈ ರೀತಿ ಮೋಸ ಹೋಗುವ ಮೊದಲು ಎಚ್ಚೆತ್ತುಕೊಳ್ಳೋದು ಒಳ್ಳೆಯದು ಅಂತ ಗ್ರಾಮಸ್ಥರು ಹೇಳಿದ್ದಾರೆ.

Source: newsfirstlive.com Source link