ಪ್ರಬಲ ಖಾತೆ ಸಿಗದಿದ್ದಕ್ಕೆ ಮುನಿಸು; ಕಚೇರಿಯ ಬೋರ್ಡ್​ ತೆರವುಗೊಳಿಸಿದ ಆನಂದ್​ಸಿಂಗ್

ಪ್ರಬಲ ಖಾತೆ ಸಿಗದಿದ್ದಕ್ಕೆ ಮುನಿಸು; ಕಚೇರಿಯ ಬೋರ್ಡ್​ ತೆರವುಗೊಳಿಸಿದ ಆನಂದ್​ಸಿಂಗ್

ಬಳ್ಳಾರಿ: ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆ ಮಾಡಿದಾಗಲೇ ಸಚಿವ ಆನಂದ್​ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕೇಳಿದ ಖಾತೆ ಕೊಡದಿದ್ದಕ್ಕೆ ಮುನಿದ ಆನಂದ್ ಸಿಂಗ್ ಪ್ರಬಲ ಖಾತೆಗೆ ಒತ್ತಡ ಹಾಕಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ಆನಂದ್ ಸಿಂಗ್ ಕಚೇರಿಯ ಬೋರ್ಡ್​ನ್ನ ಆನಂದ್ ಸಿಂಗ್ ತೆರವುಗೊಳಿಸಿದ್ದಾರೆ. ಶಾಸಕರ ಕಚೇರಿ ಎಂದಿದ್ದ ಬೋರ್ಡ್​ನ್ನ ಬದಲಿಸಿದ ಆನಂದ್ ಸಿಂಗ್ ಈ ಮೂಲಕ ಪ್ರಬಲ ಖಾತೆ ಪಡೆಯಲು ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.

blank

Source: newsfirstlive.com Source link