ಆನಂದ್ ಸಿಂಗ್ ಅಸಮಾಧಾನ: ‘ಆಗಸ್ಟ್ 15 ರವರೆಗೆ ಸುಮ್ಮನಿರಿ’ ಅಂದಿದ್ದಾರಂತೆ ಸಿಎಂ ಬೊಮ್ಮಾಯಿ

ಆನಂದ್ ಸಿಂಗ್ ಅಸಮಾಧಾನ: ‘ಆಗಸ್ಟ್ 15 ರವರೆಗೆ ಸುಮ್ಮನಿರಿ’ ಅಂದಿದ್ದಾರಂತೆ ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರಬಲ ಖಾತೆ ಸಿಗದಿರುವುದಕ್ಕೆ ಬೇಸರಗೊಂಡಿರುವ ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಂಬ ಚರ್ಚೆ ನಡೆಯುತ್ತಿರುವ ವಿಚಾರವಾಗಿ ನ್ಯೂಸ್‌ಫಸ್ಟ್‌‌ಗೆ ಸಚಿವ ಆನಂದ್ ಸಿಂಗ್ ಮೂಲಗಳಿಂದಲೇ ನಿಖರ ಮಾಹಿತಿ ಲಭ್ಯವಾಗಿದೆ. ಮಾಹಿತಿ ಪ್ರಕಾರ ಆಗಸ್ಟ್ 15 ರವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಸುಮ್ಮನಿರುವಂತೆ ತಿಳಿಸಿದ್ದಾರಂತೆ.

ಇದನ್ನೂ ಓದಿ: ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಸಿಎಂಗೆ ಹೇಳಿರುವೆ -ಆನಂದ್ ಸಿಂಗ್

ಸದ್ಯ ತಮ್ಮ ಕ್ಷೇತ್ರದಲ್ಲಿ ಸಚಿವ ಆನಂದ್ ಸಿಂಗ್ ಇದ್ದಾರೆ. ಇಂದು ವಿಜಯನಗರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿದೆ. ಆಗಸ್ಟ್ 15 ರಂದು ಧ್ವಜಾರೋಹಣದ ಪಟ್ಟಿ ಕೂಡ ಬಿಡುಗಡೆಯಾಗಿದೆ. ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬುದು ಆನಂದ್ ಸಿಂಗ್‌ರ ಕನಸು. ಜಿಲ್ಲೆ ಪ್ರತ್ಯೇಕವಾದ ಬಳಿಕ ಮೊದಲ ಬಾರಿಗೆ ಅವರು ಧ್ವಜಾರೋಹಣ ಮಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಮುಗಿಯದ ಖಾತೆ ಕ್ಯಾತೆ; ಕುಟುಂಬ ಸಮೇತ ಸಿಎಂ ಬೊಮ್ಮಾಯಿ ಭೇಟಿಯಾದ ಆನಂದ್ ಸಿಂಗ್

ಕಳೆದ ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿರನ್ನು ಭೇಟಿಯಾಗಿದ್ದಾರೆ. ಆ ಸಂದರ್ಭದಲ್ಲಿ ಒಂದು ವಾರಗಳ ಕಾಲಾವಕಾಶವನ್ನು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಕೇಳಿದ್ದಾರೆ. ಆಗಸ್ಟ್ 15 ರ ಬಳಿಕವಷ್ಟೇ, ರಾಜೀನಾಮೆಯೋ, ಸಚಿವ ಸ್ಥಾನದಲ್ಲಿ ಬದಲಾವಣೆಯೋ ಎಂಬುದು ಗೊತ್ತಾಗಲಿದೆ. ಸದ್ಯಕ್ಕಂತೂ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅವರು ಕ್ಷೇತ್ರದಲ್ಲಿದ್ದಾರೆ ಎಂದು ನ್ಯೂಸ್‌ಫಸ್ಟ್‌‌ಗೆ ಆನಂದ್ ಸಿಂಗ್ ಆಪ್ತ ಸ್ಪಷ್ಟನೆ ನೀಡಿದ್ದಾರೆ.

Source: newsfirstlive.com Source link