ಪಂಚಮಸಾಲಿಗೆ ಬರಬೇಕಿದ್ದ ಸಿಎಂ ಸ್ಥಾನವನ್ನು ಯಡಿಯೂರಪ್ಪ ತಪ್ಪಿಸಿದರು: ಜಯಮೃತ್ಯುಂಜಯ ಶ್ರೀ

ದಾವಣಗೆರೆ: ಮೀಸಲಾತಿ ಹೋರಾಟದಲ್ಲಿ ನಮ್ಮ ಶಕ್ತಿ ನೋಡಿ ಕೇಂದ್ರದ ವರಿಷ್ಠರು ಮುಖ್ಯಮಂತ್ರಿ ಸ್ಥಾನವನ್ನು ಪಂಚಮಸಾಲಿ ಸಮಾಜಕ್ಕೆ ನೀಡಬೇಕು ಎಂದುಕೊಂಡಿದ್ದರು. ಆದರೆ ಯಡಿಯೂರಪ್ಪನವರು ತಪ್ಪಿಸಿದರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಕೆಲವರ ಹೆಸರು ಸಿಎಂ ಹೆಸರಿನಲ್ಲಿ ಓಡ್ತಿತ್ತು. ಕೊನೆಯವರೆಗೂ ಮೂರು ಜನರು ಸಿಎಂ ರೇಸ್ ನಲ್ಲಿ ಇದ್ದರು. ಆದರೆ ಕೊನೆಗೆ ಬೊಮ್ಮಯಿಯವರನ್ನು ಅವರ ಹೈಕಮಾಂಡ್ ಸಿಎಂ ಎಂದು ಘೋಷಣೆ ಮಾಡಿತು. ಇದರಿಂದ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ತಪ್ಪಿಸಿದರಾ ಯಡಿಯೂರಪ್ಪನವರು ಎಂಬ ನೋವು ಸಮಾಜಕ್ಕೆ ಕಾಡುತ್ತಿದೆ ಎಂದರು. ಇದನ್ನೂ ಓದಿ: ಅಕ್ಟೋಬರ್ 1ರೊಳಗೆ ಮೀಸಲಾತಿ ಪ್ರಕಟಿಸಿ- ಸರ್ಕಾರಕ್ಕೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಂದೇಶ

ಮಾಜಿ ಸಿಎಂ ಯಡಿಯೂರಪ್ಪನವರನ್ನು ನಂಬಿದ್ದೆವು. ಆದರೆ ಯಡಿಯೂರಪ್ಪನರು ಯಾಕೆ ಹೀಗೆ ಮಾಡಿದರು ಎಂಬ ಕೊರಗು ನಮಗೆ ಕಾಡುತ್ತಿದೆ. ಅವರು ಉತ್ತರ ಕರ್ನಾಟಕ ಭಾಗಕ್ಕೆ ಬಂದ ಮೇಲೆ ಪಂಚಮಸಾಲಿ ಸಮಾಜಕ್ಕೆ ಈ ಬಗ್ಗೆ ಉತ್ತರ ಕೊಡಲಿ ಎಂದು ತಿಳಿಸಿದರು.

Source: publictv.in Source link