ED ದಾಳಿ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಬಂದ ಡಿಕೆಎಸ್; ಒಬ್ಬರಿಗೊಬ್ಬರು ಅಪ್ಪಿಕೊಂಡ ಕೈ ನಾಯಕರು

ED ದಾಳಿ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಬಂದ ಡಿಕೆಎಸ್; ಒಬ್ಬರಿಗೊಬ್ಬರು ಅಪ್ಪಿಕೊಂಡ ಕೈ ನಾಯಕರು

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಮೀರ್ ಮನೆಗೆ ಭೇಟಿ ನೀಡಿದ್ದಾರೆ. ಇ.ಡಿ. ಕೇಸನ್ನೇ ಬಳಸಿಕೊಂಡು ಜಮೀರ್ ಜೊತೆ ಮಿತ್ರತ್ವ ಸಾಧಿಸಲು ಡಿ.ಕೆ. ಶಿವಕುಮಾರ್ ಮುಂದಾದರಾ ಎಂಬ ಚರ್ಚೆ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ.

blank

ಇತ್ತ ಸಿದ್ದರಾಮಯ್ಯ ಇಡಿ ದಾಳಿ ನಂತರ ಜಮೀರ್​ರಿಂದ ಅಂತರ ಕಾಯ್ದುಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್​ ಹತ್ತಿರವಾಗಲು ಮನೆಗೇ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಜಮೀರ್ ಮನೆಗೆ ಬಂದು ಹೂಗುಚ್ಛ ಕೊಟ್ಟು ಡಿ.ಕೆ. ಶಿವಕುಮಾರ್ ಅಪ್ಪಿಕೊಂಡಿದ್ದಾರೆ. ಅಲ್ಲದೇ ಜಮೀರ್ ಜೊತೆಗೆ ಆಪ್ತ ಸಮಾಲೋಚನೆಯನ್ನೂ ನಡಸಿದ್ದಾರಂತೆ.

 

Source: newsfirstlive.com Source link