ಆಗಸ್ಟ್ 15ರ ಸ್ವಾತಂತ್ರ್ಯ ಧ್ವಜಾರೋಹಣಕ್ಕೆ ಸಚಿವರ ನೇಮಕ.. ಅಶೋಕ್​ಗೆ ಸಿಗದ ಭಾಗ್ಯ

ಆಗಸ್ಟ್ 15ರ ಸ್ವಾತಂತ್ರ್ಯ ಧ್ವಜಾರೋಹಣಕ್ಕೆ ಸಚಿವರ ನೇಮಕ.. ಅಶೋಕ್​ಗೆ ಸಿಗದ ಭಾಗ್ಯ

ಬೆಂಗಳೂರು: ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಯಾವ ಯಾವ ಸಚಿವರು ಎಲ್ಲೆಲ್ಲಿ ಧ್ವಜಾರೋಹಣ ಮಾಡಬೇಕೆಂಬ ಪಟ್ಟಿಯನ್ನ ಸರ್ಕಾರ ಬಿಡುಗಡೆಗೊಳಿಸಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಜಾರೋಹಣ ಮಾಡಿದ್ರೆ.. ಚಾಮರಾಜನಗರ, ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.

ಆರ್.ಅಶೋಕ್‌ಗೆ ಧ್ವಜಾರೋಹಣ ಭಾಗ್ಯ ಮಿಸ್ ಆಗಿದೆ. ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡುತ್ತಿದ್ದು ಇತ್ತ ಬೇರೆ ಜಿಲ್ಲೆಗೂ ಧ್ವಜಾರೋಹಣ ಮಾಡಲು ನಿಯೋಜಿಸಿಲ್ಲ. ಹೀಗಾಗಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡುವ ಅವಕಾಶವನ್ನ ಆರ್​. ಅಶೋಕ್ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಯಾರು ಎಲ್ಲಿ ಧ್ವಜಾರೋಹಣ ಮಾಡಲಿದ್ದಾರೆ..?

 1. ಎಂಟಿಬಿ ನಾಗರಾಜ್​-ಬೆಂಗಳೂರು ಗ್ರಾಮಾಂತರ
 2. ಈಶ್ವರಪ್ಪ- ಶಿವಮೊಗ್ಗ
 3. ಉಮೇಶ್ ಕತ್ತಿ- ಬಾಗಲಕೋಟೆ
 4. ಅಂಗಾರ- ದಕ್ಷಿಣ ಕನ್ನಡ.
 5. ಬಿಸಿ ಪಾಟೀಲ್- ಹಾವೇರಿ
 6. ಅಶ್ವಥ್ ನಾರಾಯಣ- ರಾಮನಗರ
 7. ಸಿಸಿ ಪಾಟೀಲ್- ಗದಗ.
 8. ಕೋಟಾ ಶ್ರೀನಿವಾಸ ಪೂಜಾರಿ- ಕೊಡಗು.
 9. ಆನಂದ್ ಸಿಂಗ್- ವಿಜಯನಗರ.
 10. ಎಸ್​.ಟಿ. ಸೋಮಶೇಖರ್ – ಮೈಸೂರು
 11. ಸುಧಾಕರ್- ಚಿಕ್ಕಬಳ್ಳಾಪುರ
 12. ಬೈರತಿ ಬಸವರಾಜ್- ದಾವಣಗೆರೆ
 13. ಮುರುಗೇಶ ನಿರಾಣಿ- ಕಲ್ಬುರ್ಗಿ.
 14. ಗೋವಿಂದ್ ಕಾರಜೋಳ- ಬೆಳಗಾವಿ
 15. ಶಶಿಕಲಾ ಜೊಲ್ಲೆ- ವಿಜಯಪುರ
 16. ಕೆ.ಸಿ. ನಾರಾಯಣ ಗೌಡ- ಮಂಡ್ಯ
 17. ಸುನಿಲ್ ಕುಮಾರ್- ಉಡುಪಿ
 18. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
 19. ಮುನಿರತ್ನ- ಕೋಲಾರ
 20. ಗೋಪಾಲಯ್ಯ- ಹಾಸನ
 21. ಮಧುಸ್ವಾಮಿ- ತುಮಕೂರು
 22. ಹಾಲಪ್ಪ ಆಚಾರ್- ಕೊಪ್ಪಳ
 23. ಶಂಕರ್ ಪಾಟೀಲ್ ಮುನೇನಕೂಪ್ಪ- ಹುಬ್ಬಳ್ಳಿ ಧಾರವಾಡ
 24. ಫ್ರಭುಚೌಹಾಣ್- ಬೀದರ್
 25. ಶ್ರೀರಾಮುಲು- ಚಿತ್ರದುರ್ಗ
 26. ಬಿ.ಸಿ.ಪಾಟೀಲ್- ಹಾವೇರಿ
 27. ಸೋಮಣ್ಣ- ರಾಯಚೂರು.
 28. ಬಿ.ಸಿ.ನಾಗೇಶ್- ಯಾದಗಿರಿ.

Source: newsfirstlive.com Source link