ಜಮೀರ್ ಮನೆಗೆ ಭೇಟಿ; ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಎಂದ ಡಿ.ಕೆ. ಶಿವಕುಮಾರ್

ಜಮೀರ್ ಮನೆಗೆ ಭೇಟಿ; ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕ ಜಮೀರ್ ನಿವಾಸದ ಮೇಲೆ ದಾಲಿ ನಡೆಸಿದ ಬೆನ್ನಲ್ಲೇ ಇಂದು ಜಮೀರ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು. ಭೇಟಿ ನಂತರ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್.. ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ.. ನೋಟ್ಸ್​ನ ಎಕ್ಸ್ ಚೇಂಜ್ ಮಾಡ್ಕೋಂಡಿದೀವಿ ಎಂದಿದ್ದಾರೆ.

ಇದನ್ನೂ ಓದಿ: ED ದಾಳಿ ಬೆನ್ನಲ್ಲೇ ಜಮೀರ್ ನಿವಾಸಕ್ಕೆ ಬಂದ ಡಿಕೆಎಸ್; ಒಬ್ಬರಿಗೊಬ್ಬರು ಅಪ್ಪಿಕೊಂಡ ಕೈ ನಾಯಕರು

ಜಮೀರ್ ನಮ್ಮ ಪಕ್ಷದ ಹಿರಿಯ ಮುಖಂಡರು, ಶಾಸಕರು. ನಾನು ಕೆಲವು ವಿಚಾರಗಳನ್ನ ತಿಳಿದುಕೊಳ್ಳಬೇಕಾಗಿತ್ತು, ಯಾಕೆ ? ಏನು? ಅಂತ.. ಅವರಿಗೆ ಕೆಲವೊಂದು ಮಾರ್ಗದರ್ಶನ ನೀಡಿದ್ದೇನೆ ನೋಟ್ಸ್ ನ ಎಕ್ಸ್ ಚೆಂಜ್ ಮಾಡ್ಕೋಂಡಿದೀವಿ ಎಂದು ಹೇಳಿದ್ದಾರೆ.

ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ..ಈಶ್ವರಪ್ಪ ಸಂಸ್ಕೃತದಲ್ಲಿ ಪಂಡಿತರು.. ವೇದ ಅಭ್ಯಾಸ ಚಂದ ಮಾಡಿದ್ದಾರೆ. ಭಾಷೆ, ಸಂಸ್ಕೃತಿ ಬಿಚ್ಚಿ ಬಿಚ್ಚಿ ಹೇಳ್ತಿದಾರೆ. ನೆನ್ನೆ ಒಂದಿಷ್ಟು, ಇವತ್ತು ಒಂದಿಷ್ಟು ಮಾತಾಡಿದಾರೆ. ಅವರ ಪಾಂಡಿತ್ಯ ಜನಕ್ಕೆ ಅರ್ಥ ಆಗ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಕೆ.ಎಸ್​​ ಈಶ್ವರಪ್ಪಗೆ ಸಂಸ್ಕಾರ, ಸಂಸ್ಕೃತಿ ಎರಡು ಇಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

Source: newsfirstlive.com Source link