ಸಿಎಂ ಭೇಟಿಯಾಗಿ ಸೌತ್ ಇಂಡಿಯಾ ಜ್ಯುವೆಲರಿ ಪ್ರದರ್ಶನ ಉದ್ಘಾಟನೆಗೆ ಆಹ್ವಾನಿಸಿದ ಟಿ.ಎ. ಶರವಣ

ಸಿಎಂ ಭೇಟಿಯಾಗಿ ಸೌತ್ ಇಂಡಿಯಾ ಜ್ಯುವೆಲರಿ ಪ್ರದರ್ಶನ ಉದ್ಘಾಟನೆಗೆ ಆಹ್ವಾನಿಸಿದ ಟಿ.ಎ. ಶರವಣ

ಬೆಂಗಳೂರು: ವಿಧಾನ ಪರಿಷತ್ ಮಾಜಿ ಶಾಸಕರು ಮತ್ತು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಟಿ. ಏ. ಶರವಣ ಇಂದು ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾದರು.

blank

ಸಿಎಂ ಭೇಟಿ ವೇಳೆ ಹೂಗುಚ್ಛ ಹಾಗೂ ನೆನಪಿನ ಕಾಣಿಕೆ ನೀಡುವ ಮೂಲಕ ಇದೇ ತಿಂಗಳು 27,28,29 ರಂದು ತ್ರಿಪುರವಾಸಿ, ಅರಮನೆ ಮೈದಾನದಲ್ಲಿ ನಡೆಯಲಿರುವ ಸೌತ್ ಇಂಡಿಯಾ ಜ್ಯುವೆಲರಿ ಪ್ರದರ್ಶನವನ್ನು ಉದ್ಘಾಟಿಸಲು ಆಮಂತ್ರಣ ನೀಡಿ ವಿನಂತಿ ಮಾಡಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ. ಸುಮೇಶ್ ವದಾರೆ, ಚೇತನ್ ಹಾಗೂ ಶ್ರೀಕಾಂತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Source: newsfirstlive.com Source link