ಯಾದಗಿರಿ ಜಿಲ್ಲಾದ್ಯಂತ ನೈಟ್ ಕರ್ಫ್ಯೂ – ಅಧಿಕಾರಿಗಳಿಂದ ಫುಲ್ ಸಿಟಿ ರೌಂಡ್ಸ್

– ಅಧಿಕಾರಿಗಳಿಗೆ ಬಿಜೆಪಿ ಯುವ ಮುಖಂಡನ ಅವಾಜ್

ಯಾದಗಿರಿ: ಕೊರೊನಾ ಮೂರನೇ ಅಲೆ ಆತಂಕ ಹಿನ್ನೆಲೆ ಯಾದಗಿರಿ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕರ್ಫ್ಯೂ ಸಮರ್ಪಕವಾಗಿ ಜಾರಿ ಮಾಡಲು ಅಧಿಕಾರಿಗಳು ಫುಲ್ ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ.

ನಗರದ ಹೋಟೆಲ್ ಮತ್ತು ಡಾಬಾಗಳ ಮೇಲೆ ಅಧಿಕಾರಿಗಳ ದಾಳಿ ಮಾಡಿ, ಮಾಲೀಕರು ಮತ್ತು ಗ್ರಾಹಕರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಎಸಿ ಪ್ರಶಾಂತ್, ಡಿಯುಡಿಸಿ ಹುಸೇನ್, ತಹಶಿಲ್ದಾರರ ಚನ್ನಮಲ್ಲಪ್ಪ, ಪೌರಾಯುಕ್ತ ಬಿಟಿ ನಾಯಕರಿಂದ ಈ ದಾಳಿ ನಡೆಯುತ್ತಿದೆ.

ಇನ್ನೂ ಡಾಬಾ ದಾಳಿ ವೇಳೆ ಅಧಿಕಾರಿಗಳಿಗೆ ಬಿಜೆಪಿ ಯುವ ಮುಖಂಡ ಭೀಮರೆಡ್ಡಿ ಕುರಕುಂದಿ ಎಂಬವರು ಅವಾಜ್ ಹಾಕಿದ ಘಟನೆ ಸಹ ನಡೆದಿದೆ. ಅಧಿಕಾರಿಗಳ ದಾಳಿ ವೇಳೆ ಅವರ ಜೊತೆಗೆ ಅಗೌರವದಿಂದ ಮಾತನಾಡಿದ ಬಿಜೆಪಿ ಮುಖಂಡ, ಎಸಿ ಪ್ರಶಾಂತ್ ಜೊತೆಗೆ ಮಾತಿನಚಕಮಕಿ ನಡೆಸಿದರು.

Source: publictv.in Source link