‘ನನಗೆ ಇಂಗ್ಲಿಷ್ ಬರಲ್ಲ.. ಅದಕ್ಕೇನಿವಾಗ’..? ಚಿನ್ನದ ಹುಡುಗ ನೀರಜ್ ಚೋಪ್ರಾ ಚಾಟಿ!

‘ನನಗೆ ಇಂಗ್ಲಿಷ್ ಬರಲ್ಲ.. ಅದಕ್ಕೇನಿವಾಗ’..? ಚಿನ್ನದ ಹುಡುಗ ನೀರಜ್ ಚೋಪ್ರಾ ಚಾಟಿ!

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಈಗ ಇಡೀ ದೇಶದಲ್ಲಿ ಸುದ್ದಿಯಲ್ಲಿದ್ದಾರೆ. ಈ ಮಧ್ಯೆ ನೀರಜ್ ಚೋಪ್ರಾ ಅವರ ಹಿಂದಿನ ಇಂಟರ್​ವ್ಯೂ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಂಗ್ಲೀಷ್​ನಲ್ಲಿ ಪ್ರಶ್ನೆ ಕೇಳಿದ ಆ್ಯಂಕರ್​ಗೆ ನೀರಜ್ ನಂಗೆ ಇಂಗ್ಲೀಷ್ ಬರಲ್ಲ.. ಅದಕ್ಕೇನಿವಾಗ..? ಎಂದು ಚಾಟಿ ಬೀಸಿದ್ದಾರೆ.

ಇನ್ನು ಪರ್ಸನಲ್ ವಿಚಾರವಾಗಿಯೂ ಆ್ಯಂಕರ್ ಪ್ರಶ್ನಿಸಿದಾಗ ಉತ್ತರಿಸರುವ ನೀರಜ್ ಚೋಪ್ರಾ.. ನಾನು ಇಲ್ಲಿ ನಿಮ್ಮ ಮುಂದೆ ಹೇಗೆ ಕೂತಿದ್ದೇನೋ ಹಾಗೇ ಎಲ್ಲ ಸಮಯದಲ್ಲೂ ಇರ್ತೇನೆ ಎಂದಿದ್ದಾರೆ. ಇನ್ನು ನೀರಜ್ ಚೋಪ್ರಾ ಅವರ ಉದ್ದ ಕೂದಲಿನ ಬಗ್ಗೆ ಕೇಳಿದಾಗ. ನಾನು ಮೊದಲಿಂದಲೂ ಉದ್ದ ಕೂದಲು ಬಿಡ್ತಿದ್ದೇನೆ.. ಮೊದಲಿಂದಲೂ ಉದ್ದಕೂದಲು ಅಂದ್ರೆ ಇಷ್ಟ.. ನನ್ನ ಇಂಗ್ಲೀಷ್ ಅಷ್ಟೇನೂ ಸರಿಯಿಲ್ಲ.. ಹೀಗಾಗಿ ನಾನು ಒಂದು ಅವಾರ್ಡ್ ಫಂಕ್ಷನ್​ಗೆ ಹೋಗಿದ್ದಾಗಲೂ ಅಲ್ಲಿ ಹಿಂದಿಯಲ್ಲೇ ಮಾತಾಡೋಣ ಎಂದಿದ್ದೆ.

ಭಾರತದಲ್ಲೂ ಜನರು ಇಂಗ್ಲೀಷ್ ಮಾತಾಡ್ತಾರೆ. ಆದರೆ ನನಗನ್ನಿಸುತ್ತೆ ಭಾರತದಲ್ಲಿ ನಾವು ಹಿಂದಿಗೆ ಸಪೋರ್ಟ್ ಮಾಡಬೇಕು. ಹಿಂದಿ ಮಾತಾಡುವವರನ್ನು ಕೀಳಾಗಿ ನೋಡಬಾರದು.. ಹಿಂದೂಸ್ತಾನದಲ್ಲಿ ಇದ್ದೇವೆ ಅಂದಮೇಲೆ ಹಿಂದಿ ಮಾತಾಡಬೇಕು. ಇಂಗ್ಲೀಷನ್ನೂ ಕಲಿಯಬೇಕು. ಅದನ್ನೂ ಕಲಿಯಿರಿ.. ಆದರೆ ಹಿಂದಿಯಲ್ಲೇ ಮಾತನಾಡಿ. ಅದರ ಬಗ್ಗೆ ಹೆಮ್ಮೆ ಪಡಿ. ನಮ್ಮ ಭಾಷೆಯ ಬಗ್ಗೆ ನಮಗೆ ಗರ್ವ ಇರಬೇಕು ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಚಿನ್ನದ ಪದಕ ತಂದ ‘ನೀರಜ್’ ಹೆಸರಿನವರಿಗೆ ಉಚಿತ ಪೆಟ್ರೋಲ್‌ ಘೋಷಿಸಿದ ಬಂಕ್‌ ಮಾಲೀಕ

Source: newsfirstlive.com Source link