ಕೇರಳಕ್ಕೆ ಹತ್ತರ ಕುತ್ತು.. ಸೋಂಕಿತರಿಗೂ ಸೋಂಕು; ಕರ್ನಾಟಕಕ್ಕೂ ಆತಂಕ ತಂದಿರೋ ದೇವರ ನಾಡು

ಕೇರಳಕ್ಕೆ ಹತ್ತರ ಕುತ್ತು.. ಸೋಂಕಿತರಿಗೂ ಸೋಂಕು; ಕರ್ನಾಟಕಕ್ಕೂ ಆತಂಕ ತಂದಿರೋ ದೇವರ ನಾಡು

ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ನಿಯಂತ್ರಣವೇ ಆಗುತ್ತಿಲ್ಲ.. ಪ್ರತಿ ದಿನ ಸರಾಸರಿ 20 ಸಾವಿರ ಕೇಸ್​ಗಳು ಇದೋಂದೇ ರಾಜ್ಯದಿಂದ ಬರ್ತಿರೋದು ಕೇಂದ್ರ ಸರ್ಕಾರಕ್ಕೂ ಆತಂಕಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ 6 ಜನರ ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರ ಕಳೆದ ವಾರ ಕೇರಳಕ್ಕೆ ಕಳಿಸಿಕೊಟ್ಟಿತ್ತು. ಆ ತಜ್ಞರ ತಂಡ ಕೇರಳದ ಬಗ್ಗೆ ವರದಿ ನೀಡಿದ್ದು ಹತ್ತರ ಕುತ್ತಿನ ಬಗ್ಗೆ ವಿವರವಾದ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಪಿಣರಾಯಿ ವಿಜಯನ್ ಸರ್ಕಾರದ ಕಾರ್ಯ ವೈಖರಿ ಬಗ್ಗೆಯೂ ಹಲವು ಪ್ರಶ್ನೆಗಳು ಮೂಡಿವೆ.

blank

ಕೇಂದ್ರದ ವರದಿಯಲ್ಲಿನ ಹತ್ತು ಪ್ರಮುಖಾಂಶಗಳು:

  1. ಕೇಂದ್ರದ ಸೂಚನೆಯಂತೆ ಕಂಟೈನ್​​ಮೆಂಟ್ ಝೋನ್ ಮಾಡದ ಕೇರಳ. ಕಂಟೈನ್​​ಮೆಂಟ್​ ಝೋನ್ ಮತ್ತು ಸೋಂಕು ಇಲ್ಲದ ಏರಿಯಾ ನಡುವೆ ಬಫರ್ ಝೋನ್ ಮಾಡದ ಪಿಣರಾಯಿ ವಿಜಯನ್ ಸರ್ಕಾರ.
  2. ಕೇರಳ ಕೇವಲ 7 ದಿನಕ್ಕೆ ಕಂಟೈನ್​ಮೆಂಟ್ ಕ್ಲಾಸಿಫಿಕೇಶನ್ ಮಾಡಿದೆ. ವಾಸ್ತವದಲ್ಲಿ ಇದಕ್ಕಾಗಿ 14 ದಿನಗಳ ಅವಶ್ಯಕತೆ ಇರುತ್ತೆ.
  3.  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ನಡಿಸಿರೋ ಸೀರೋ ಸರ್ವೇ ಪ್ರಕಾರ ಕೇರಳದಲ್ಲಿ ಇನ್ನೂ ಶೇ.55ರಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಅಂದರೆ ಕೇವಲ ಶೇ.45 ಜನರಲ್ಲಿ ಆ್ಯಂಟಿ ಬಾಡಿ ಅಂದ್ರೆ ರೋಗ ನಿರೋಧಕ ಶಕ್ತಿ ಕಣಗಳು ಕಂಡು ಬಂದಿವೆ.
  4. ಕೇರಳಕ್ಕೆ ಕೊರೊನಾ ವೈರಸ್​ನ ರೂಪಾಂತರಿ ತಳಿ ಡೆಲ್ಟಾ ಪ್ರಭೇದ ಸಾಕಷ್ಟು ಆತಂಕ ತಂದೊಡ್ಡಿದೆ. ಹೊಸ ಸೋಂಕಿತರಲ್ಲಿ ಶೇ. 88-90 ರಷ್ಟು ಜನರಿಗೆ ಡೆಲ್ಟಾ ತಳಿಯೇ ಕಂಡು ಬರ್ತಿದೆ.
  5. ಕೇರಳದಲ್ಲಿ ಅತಿ ಹೆಚ್ಚು ಜನರಿಗೆ ಸೋಂಕು ಬಂದ ಬಳಿಕವೂ ಮತ್ತೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಎರಡೂ ಡೋಸ್​ ವ್ಯಾಕ್ಸಿನ್ ಪಡೆದ ಬಳಿಕವೂ ಬರೋಬ್ಬರಿ 15 ಜನರಲ್ಲಿ ಸೋಂಕು ಮರು ಕಾಣಿಸಿಕೊಂಡಿದೆ.
  6. ಕೇರಳದ ಜಿಲ್ಲಾ ವೈದ್ಯಾಧಿಕಾರಿಗಳು ಕೇಂದ್ರದ ತಂಡಕ್ಕೆ ನೀಡಿರೋ ಮಾಹಿತಿ ಪ್ರಕಾರ, ಪಟ್ನಂಥಿಟ್ಟಾ ಅದಲ್ಲಿ 14,974 ಜನರಿಗೆ ಮರು ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲಿ 5,042 ಜನರು ಎರಡೂ ಡೋಸ್​ ವ್ಯಾಕ್ಸಿನ್​ ಪಡೆದುಕೊಂಡಿದ್ದರು ಅಂತಾ ಹೇಳಲಾಗಿದೆ.
  7. ಇದೇ ಕಾರಣದಿಂದ ಕೇಂದ್ರದ ತಂಡ ರೀ-ಇನ್​ಫೆಕ್ಷನ್​ ಬಗ್ಗೆ ಮತ್ತಷ್ಟು ವಿವರಗಳನ್ನು ಕೇರಳ ಸರ್ಕಾರಕ್ಕೆ ಕೇಳಿದೆ. ಅಲ್ಲದೇ ಸಿಂಗಲ್​ ಡೋಸ್​ ವ್ಯಾಕ್ಸಿನ್ ಪಡೆದ ಎಷ್ಟು ಜನರಲ್ಲಿ ಸೋಂಕು ಬಂದಿದೆ? ಎರಡೂ ಡೋಸ್​ ಪಡೆದ ಎಷ್ಟು ಜನರು ಸೋಂಕಿತರಾಗಿದ್ದಾರೆ? ಇದ್ರಲ್ಲಿ ಎಷ್ಟು ಜನರು ಸೀರಿಯಸ್ ಆಗಿದ್ದಾರೆ? ಈ ಬಗ್ಗೆ ವಿವರ ಕೋರಿದ ಕೇಂದ್ರ.
  8. ದೇಶದಲ್ಲಿ ಅತಿ ಹೆಚ್ಚು ವೃದ್ಧರು ವಾಸಿಸುವ ರಾಜ್ಯಗಳಲ್ಲಿ ಕೇರಳವೂ ಮುಂಚೂಣಿಯಲ್ಲಿದೆ. ಇದೂ ಸೋಂಕು ಹೆಚ್ಚಾಗಲು ಕಾರಣ ಅಂತ ತಜ್ಞರ ತಂಡ ಅಭಿಪ್ರಾಯ ಪಟ್ಟಿದೆ. ಜೊತೆಗೆ ಶೇ.30 ರಷ್ಟು ಜನರಿಗೆ ಕೇರಳದಲ್ಲಿ ಸಕ್ಕರೆ ಖಾಯಿಲೆ ಇದ್ದು, ಇದು ಕೋ-ಮಾರ್ಬಿಡ್ ಕಂಡೀಷನ್​ಗೆ ಕಾರಣವಾಗಿದೆ.
  9. ಕೇರಳದಲ್ಲಿ ಶೇ.80ರಷ್ಟು ಕೊರೊನಾ ಸೋಂಕಿತರು ಹೋಮ್ ಐಸೋಲೇಷನ್​​ನಲ್ಲಿ ಇದ್ದಾರೆ. ಇದು ಅಂತರ್​​ಗೃಹ ಸೋಂಕು ಹರಡಲು ಕಾರಣವಾಗಿದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಅಂತರ್​​​ ಗೃಹ ಸೋಂಕು ಕೇರಳದಲ್ಲಿ ಕಂಡು ಬಂದಿದೆ.
  10. ಕೇರಳ ರಾಜ್ಯ ಸರ್ಕಾರ ಸೋಂಕು ಹರಡದಂತೆ ತಡೆಯುವ ಯಾವುದೇ ಕ್ರಮ ಕೈಗೊಳ್ಳದಿರೋದು ಕಂಡು ಬಂದಿದೆ. ಕೇರಳ ಸರ್ಕಾರ ಹೆಚ್ಚಾಗಿ ಹೊಸ ಸೋಂಕಿತರನ್ನು ಟ್ರಾಕ್ ಮಾಡುವುದ ಮತ್ತು ಟ್ರೇಸ್​ ಮಾಡುವುದಕ್ಕಾಗಿ ತೀವ್ರ ನಿಗಾ ವಹಿಸಿರೋದು ಕಂಡು ಬಂದಿದೆ.

Source: newsfirstlive.com Source link