ಲೇಡಿ ಸೂಪರ್​ಸ್ಟಾರ್ ಕೊನೆಗೂ ಎಂಗೇಜ್.. ಅಧಿಕೃತವಾಗಿ ಮಾಹಿತಿ ಕೊಟ್ಟ ನಯನತಾರಾ

ಲೇಡಿ ಸೂಪರ್​ಸ್ಟಾರ್ ಕೊನೆಗೂ ಎಂಗೇಜ್.. ಅಧಿಕೃತವಾಗಿ ಮಾಹಿತಿ ಕೊಟ್ಟ ನಯನತಾರಾ

ಲೇಡಿ ಸೂಪರ್​ಸ್ಟಾರ್​ ಅಂತಲೇ ಸಖತ್​ ಫೇಮಸ್​ ಆಗಿರುವ ಬಹುಭಾಷಾ ನಟಿ ನಯನತಾರಾ ಕೊನೆಗೂ ತಾವು ಎಂಗೇಜ್​ ಅಂತ ತಿಳಿಸಿದ್ದಾರೆ.

ಖಾಸಗಿ ಚಾನೆಲ್​ ಒಂದರಲ್ಲಿ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಯನ ತಾರಾ, ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಒಟ್ಟಿಗೆ ತಾವು ಎಂಗೇಜ್​ಮೆಂಟ್​ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಎಂಗೇಜ್​ಮೆಂಟ್​ ರಿಂಗ್​ ಅನ್ನು ಬಹಿರಂಗವಾಗಿ ತೋರಿಸಿದ್ದು, ಆದಷ್ಟು ಬೇಗ ಹಸೆಮಣೆ ಏರುತ್ತಿರೋದಾಗಿ ಲೇಡಿ ಸೂಪರ್​ ಸ್ಟಾರ್​ ತಮ್ಮ ಫ್ಯಾನ್ಸ್​ಗೆ ಗುಡ್​ ನ್ಯೂಸ್​ ಹೇಳಿದ್ದಾರೆ.

blank

ಇಂಟರ್​ವ್ಯೂನಲ್ಲಿ ಹೋಸ್ಟ್ ನಯನತಾರಾ ಅವರ ಕೈನಲ್ಲಿದ್ದ ರಿಂಗ್ ಬಗ್ಗೆ ಪ್ರಶ್ನೆ ಕೇಳಿದಾಗ ನಯನತಾರಾ ಇದು ತಮ್ಮ ಎಂಗೇಜ್​ ಮೆಂಟ್ ರಿಂಗ್ ಎಂದು ಮಾಹಿತಿ ನೀಡಿದ್ದಾರೆ. ಇನ್ನು ನಾನು ರೌಡಿದಾನ್ ಸಿನಿಮಾ ಸೆಟ್​​ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಮೊದಲಿಗೆ ಭೇಟಿಯಾಗಿದ್ದರಂತೆ.

blank

ಈ ಹಿಂದೆ ಹಲವು ಬಾರಿ ನಯನತಾರಾ ವಿಘ್ನೇಶ್ ಜೊತೆ ಫೋಟೋ ಹಂಚಿಕೊಂಡಿದ್ದರು. ಹೀಗಾಗಿ ನಯನತಾರಾ ಸೀಕ್ರೆಟ್ಟಾಗಿ ಮದುವೆಯಾಗಿದ್ದಾರಾ ಎಂಬ ಕುತೂಹಲ ಸಿನಿಮಾ ರಂಗದಲ್ಲಿ ಹುಟ್ಟಿಕೊಂಡಿತ್ತು.

 

 

View this post on Instagram

 

A post shared by nayanthara🔵 (@nayantharaaa)

Source: newsfirstlive.com Source link