ಜನರಲ್ ಬಿಪಿನ್ ರಾವತ್​​​ರನ್ನ ಭೇಟಿಯಾದ ಸುಭೇದಾರ್​​ ನೀರಜ್​ ಚೋಪ್ರಾ

ಜನರಲ್ ಬಿಪಿನ್ ರಾವತ್​​​ರನ್ನ ಭೇಟಿಯಾದ ಸುಭೇದಾರ್​​ ನೀರಜ್​ ಚೋಪ್ರಾ

ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್​ ಚೋಪ್ರಾ ಭಾರತ ಸೇನೆಯ ಜರನರಲ್ ಬಿಪಿನ್​ ರಾವತ್​ರನ್ನ ಭೇಟಿ ಮಾಡಿ ಮಾತು ಕಥೆ ನಡೆಸಿದ್ದಾರೆ.

ಹೌದೂ, ಟೋಕಿಯೋ ಒಲಿಂಪಿಕ್ಸ್​​ನ ಜಾವಲಿನ್​ ಥ್ರೋನಲ್ಲಿ ನೀರಜ್​ ಚೋಪ್ರಾ ಮೊದಲನೇ ಸ್ಥಾನ ಪಡೆದು ಗೆದ್ದು ತಂದ ಚಿನ್ನದ ಮೆಡಲ್​ನ್ನ ಭಾರತಾಂಬೆಗೆ ಅರ್ಪಿಸಿದ್ರು. ಅಷ್ಟೇ ಅಲ್ಲ, ಅವ್ರು ಭಾರತದ ಸೇನೆಯಲ್ಲಿಯೂ ಸುಭೇಧಾರ ಆಗಿ ಕಾರ್ಯ ನಿರ್ವಹಿಸುತ್ತಿರೋ ಯೋಧ. ಹೀಗಾಗಿ, ಗೆದ್ದ ಚಿನ್ನದ ಪದಕವನ್ನ ತಮ್ಮ ತಂದೆ-ತಾಯಿಯೊಂದಿಗೆ ಜನರಲ್ ಬಿಪಿನ್​ ರಾವತ್​ನ ಭೇಟಿ ಮಾಡಿ ಅವರ ಆಶೀರ್ವಾದವನ್ನ ಪಡೆದುಕೊಂಡಿದ್ದಾರೆ. ಈ ಬಗ್ಗೆ, ಭಾರತ ಸೇನೆಯ ADG PI ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ನನಗೆ ಇಂಗ್ಲಿಷ್ ಬರಲ್ಲ.. ಅದಕ್ಕೇನಿವಾಗ’..? ಚಿನ್ನದ ಹುಡುಗ ನೀರಜ್ ಚೋಪ್ರಾ ಚಾಟಿ!

 

Source: newsfirstlive.com Source link