ರಾಖಿ ಸಾವಂತ್​ರ ಜಾವೆಲಿನ್​ ಥ್ರೋ ನೋಡಿದ್ರಾ? ಅವ್ರಿಗೂ ಮೆಡಲ್​ ಕೊಡ್ಬೇಕಂತೆ

ರಾಖಿ ಸಾವಂತ್​ರ ಜಾವೆಲಿನ್​ ಥ್ರೋ ನೋಡಿದ್ರಾ? ಅವ್ರಿಗೂ ಮೆಡಲ್​ ಕೊಡ್ಬೇಕಂತೆ

ರಾಖಿ ಸಾವಂತ್​,  ಇವ್ರು ಡಿಫರೆಂಟ್​ ಅಂತ ಎಲ್ಲರಿಗೂ ಗೊತ್ತು…ಇವ್ರು ಏನೇ ಮಾಡಿದ್ರೂ ಅದ್ರಲ್ಲೊಂದು ಇಮಿಟೇಷನ್​ ಇದ್ದೇ ಇರುತ್ತೆ. ಇವ್ರ ಒಂದೊಂದು ಪೋಸ್ಟ್ ಎಷ್ಟ್​ ವೈರಲ್​ ಆಗುತ್ತೆ ಅಂತ ಎಲ್ಲರಿಗೂ ಗೊತ್ತು. ಮೊನ್ನೆ ಮೊನ್ನೆ ತಾನೆ ಟೋಕಿಯೋ ಒಲಂಪಿಕ್ಸ್​ ಮುಗಿದಿದೆ. ಅಷ್ಟರಲ್ಲಿ ರಾಖಿ ಸಾವಂತ್ ಹೊಸಾ ವಿಡಿಯೋವೊಂದನ್ನ ಪೋಸ್ಟ್​ ಮಾಡಿದ್ದು, ಸಖತ್ ವೈರಲ್​ ಆಗ್ತಾಯಿದೆ.

ಭಾರತಕ್ಕೆ ಚಿನ್ನದ ಪದಕವನ್ನ ತಂದುಕೊಟ್ಟಂಥ ನೀರಜ್​ ಚೋಪ್ರಾರನ್ನ ರಾಖಿ ಸಾವಂತ್​ ಇಮಿಟೇಟ್​ ಮಾಡಿದ್ದಾರೆ. ಜಾವೆಲಿನ್​ ಥ್ರೋನಲ್ಲಿ ಓಡಿ ಬಂದು ಥ್ರೋ ಮಾಡೋ ಥರ, ರಾಖಿ ಸಾವಂತ್ ಒಂದು ಕಡ್ಡಿಯನ್ನ ಹಿಡಿದು ಓಡಿ ಬಂದು ಎಸೆದಿದ್ದಾರೆ. ಪಿಂಕ್​ ಕಲರ್​ ಟಿ-ಶರ್ಟ್​ ಹಾಕೊಂಡು ​ಈ ವಿಡಿಯೋ ಮಾಡಿದ್ದಾರೆ. ಅಲ್ಲದೆ, ಮೆಡಲ್​ ಕೊಡ್ಬೇಕು ಅಂತ ಪೋಸ್ಟ್​​​ಗೆ ಹಣೆಬರಹ ನೀಡಿದ್ದಾರೆ.

 

Source: newsfirstlive.com Source link