ಌಪಲ್​ ಜ್ಯೂಸ್​ ಓಕೆ, ಗ್ರೇಪ್ಸ್​ ಜ್ಯೂಸ್​ ಓಕೆ.. ಖೂನಿ ಜ್ಯೂಸ್​ ಕುಡ್ದಿದ್ದೀರಾ?

ಌಪಲ್​ ಜ್ಯೂಸ್​ ಓಕೆ, ಗ್ರೇಪ್ಸ್​ ಜ್ಯೂಸ್​ ಓಕೆ.. ಖೂನಿ ಜ್ಯೂಸ್​ ಕುಡ್ದಿದ್ದೀರಾ?

ಜ್ಯೂಸ್​ ಅಂದ್ರೆ ಯಾರಿಗ್​ ತಾನೆ ಇಷ್ಟ ಇರಲ್ಲ ಹೇಳಿ? ಅದ್ರಲ್ಲೂ ಬೇಸಿಗೆ ಕಾಲದಲ್ಲಿ ಜ್ಯೂಸ್​ ಕುಡಿಯೋ ಮಜಾನೇ ಬೇರೆ. ಎಲ್ಲಾ ತರ ಜ್ಯೂಸ್​ನೂ ನೀವು ಕುಡ್ದಿರ್ತಿರಾ ಬಿಡಿ. ಌಪಲ್​ ಜ್ಯೂಸ್​, ಮ್ಯಾಂಗೋ ಜ್ಯೂಸ್​, ಗ್ರೇಪ್ಸ್​ ಜ್ಯೂಸ್​ ಹೇಳ್ತಾ ಹೋದ್ರೆ ಜ್ಯೂಸ್​ ಅಂಗಡಿಯಲ್ಲಿರೋ ಎಲ್ಲಾ ಹೆಸ್ರನ್ನೂ ಹೇಳ್ಬೇಕಾಗುತ್ತೆ ಅಷ್ಟೆ.

ಆದ್ರೆ, ಇಲ್ಲೊಬ್ರು ಎಲ್ಲಾ ಥರದ ತರಕಾರಿಗಳನ್ನ ಹಾಕಿ ಒಂದ್​ ಜ್ಯೂಸ್​ ಮಾಡ್ತಾರೆ. ಏನ್​ ಸಖತ್ತಾಗಿರುತ್ತೆ ಅಂದ್ರೆ ಯಪ್ಪಾ, ಸೂಪರ್​. ಇದ್ರ ಹೆಸ್ರು ಖೂನಿ ಜ್ಯೂಸ್​ ಅಂತ. ಹರಿಯಾಣದಲ್ಲಿ, ಬೀದಿ ಬದಿ ಜ್ಯೂಸ್​ ಮೇಕರ್​ ಈ ಜ್ಯೂಸ್​ನ್ನ ಮಾಡ್ತಾರೆ. ಇದಕ್ಕೆ ಎಲ್ಲಾ ತರದ ತರಕಾರಿಗಳು, ಹಣ್ಣುಗಳು ಹಾಕಿ ಕೆಂಪ್​ ಕಲರ್​ ಬರೋ ಹಾಗೆ ಜ್ಯೂಸ್​ ಮಾಡಿ ಕೊಡ್ತಾರೆ. ಆ ಜ್ಯೂಸ್​ ತುಂಬಾ ಟೇಸ್ಟಿಯಾಗಿರುತ್ತೆ ಅಂತಾರೆ ಅಲ್ಲಿಗೆ ಬರೋರು. ನೀವು ಮನೆಯಲ್ಲಿ ಈ ಟೇಸ್ಟಿಯಾಗಿರೋ ಜ್ಯೂಸ್​ ಕುಡಿಯೋಹಾಗ್​ ಇದ್ರೆ ಕುಡ್ದದದ ನೋಡಿ. ಹೇಗ್ ಮಾಡೋದು ಅನ್ನೋ ವಿಡಿಯೊ ಇಲ್ಲಿದೆ ನೋಡಿ.

Source: newsfirstlive.com Source link