ಬಿಜೆಪಿಗೆ ಬಿಸಿ ತುಪ್ಪ ಆದ್ರ ಆನಂದ್ ಸಿಂಗ್? ಸಚಿವ ಸ್ಥಾನಕ್ಕೆ ರಾಜೀನಾಮೆಯ ತಂತ್ರಗಾರಿಕೆ?

ಬಿಜೆಪಿಗೆ ಬಿಸಿ ತುಪ್ಪ ಆದ್ರ ಆನಂದ್ ಸಿಂಗ್? ಸಚಿವ ಸ್ಥಾನಕ್ಕೆ ರಾಜೀನಾಮೆಯ ತಂತ್ರಗಾರಿಕೆ?

ಬೆಂಗಳೂರು: ಖಾತೆ ಹಂಚಿಕೆ ಬಳಿಕ ಮುನಿಸಿಕೊಂಡಿದ್ದ ಸಚಿವ ಆನಂದ ಸಿಂಗ್ ನಾನು ಹಠವಾದಿ ಅಂದುಕೊಂಡನ್ನ ಸಾಧಿಸೋವ್ರಿಗೂ ಬಿಡಲ್ಲ ಎಂದಿದ್ರು. ಜೊತೆಗೆ ರಾಜೀನಾಮೆ ನೀಡುವ ಮಾತುಗಳನ್ನೂ ಆಡಿದ್ರು. ಇದೀಗ ಆಡಿದ ಮಾತಿನಂತೆ ಪಟ್ಟುಸಡಿಲಿಸದೇ ಜಿದ್ದಿಗೆ ಬಿದ್ದಿದ್ದಾರೆ. ಅದಕ್ಕಾಗಿ ಬೇಕಾದ ಸಿದ್ಧತೆಗಳೆಗೂ ಹೊಸಪೇಟೆ ಶಾಸಕರು ಕೈಹಾಕಿದ್ದಾರೆ.

blank

ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಿರೀಕ್ಷಿತ ಖಾತೆ ಸಿಗಲಿಲ್ಲ ಅಂತಾ ಸಚಿವ ಆನಂದ್‌ ಸಿಂಗ್ ಸಿಡಿದೆದ್ದಿದ್ದಾರೆ. ತಮಗೆ ಕೇಳಿದ್ದ ಖಾತೆ ಸಿಗಲಿಲ್ಲ ಅಂತಾ ರಾಜೀನಾಮೆಗೂ ಸಿದ್ಧರಾಗಿದ್ದಾರೆ. ಜೊತೆಗೆ ಕಾದು ನೋಡುವ ತಂತ್ರಕ್ಕೂ ಮುಂದಾಗಿದ್ದಾರೆ. ಇದೀಗ ಖಾತೆ ಬಗ್ಗೆ ಕ್ಯಾತೆ ತೆಗೆದಿರೋ ಆನಂದ್ ಸಿಂಗ್‌ ಒಂದೊಂದಾಗಿ ತಮ್ಮ ಅಸ್ತ್ರಗಳನ್ನ ಸಿದ್ಧಗೊಳಿಸುತ್ತಿದ್ದಾರೆ.

ಕಚೇರಿಯ ಬೋರ್ಡ್ ತೆರವುಗೊಳಿಸಿದ ಹೊಸಪೇಟೆ ಶಾಸಕ
ಗಣಿನಾಡಿನಲ್ಲಿ ಮತ್ತೇ ರಾಜೀನಾಮೆ ಅಮಾಧಾನ ಶುರುವಾಗಿ ಬಿಟ್ಟಿದೆ. ಸಿಎಂ ಬಸವರಾಜ್ ಬೊಮ್ಮಾಯಿ‌ ಸರ್ಕಾರದಲ್ಲಿ ಪ್ರಬಲ ಖಾತೆಗೆ ಬೇಡಿಕೆ ಇಟ್ಟಿದ ಸಚಿವ ಆನಂದ ಸಿಂಗ್ ಸದ್ಯ ಜಾಣ್ಮೆಯ ನಡೆಯನ್ನ ಪ್ರದರ್ಶಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಆನಂದ್‌, ಬಿಎಸ್‌ವೈ ನೇತೃತ್ವದ ಸರ್ಕಾರದ ರಚನೆ ಮೊದಲು ಕೈ ಜೊಡಿಸಿದ್ರು. ಇದೀಗ ಬೊಮ್ಮಾಯಿ‌ ಸರ್ಕಾರ ಮೇಲೆ‌ ಮುನಿಸಿಕೊಂಡಿದ್ದಾರೆ. ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಬೇಡ ಅಂತಾ ಪಟ್ಟು ಹಿಡಿದಿದ್ದಾರೆ.

blank

ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆಯ ತಂತ್ರಗಾರಿಕೆ?
ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾದ ಮರು ದಿನವೇ ಸಿಎಂ ಬಸವರಾಜ ಬೊಮ್ಮಾಯಿಯನ್ನ ಆನಂದ್ ಸಿಂಗ್ ಭೇಟಿ ಮಾಡಿದ್ರು. ಬಳಿಕ ಸಿಎಂ‌ ಕೊಟ್ಟ ಭರವಸೆಯ ಮಾತಿಗೆ ಆನಂದ್ ಸಿಂಗ್ ಸೈಲೆಂಟ್ ಆಗಿದ್ದಾರೆ. ಅಲ್ಲದೇ ತಮ್ಮ ಮನೆಯಲ್ಲೇ ಉಳಿದುಕೊಂಡು ಮೌನಕ್ಕೆ ಶರಣಾಗಿದ್ದಾರೆ. ಇದೀಗ 15 ವರ್ಷಗಳ ತಮ್ಮ ಶಾಸಕ ಕಚೇರಿಯ ಬೋರ್ಡ್‌ ಅನ್ನು ತೆರವುಗೊಳಿಸಿದ್ದಾರೆ. ಇದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆನಂದ್ ಸಿಂಗ್ ಹೂಡುತ್ತಿರುವ ತಂತ್ರಗಾರಿಕೆಯಾ ಎಂಬ ಪ್ರಶ್ನೆಯನ್ನ ಹುಟ್ಟಿಸಿದೆ.

Source: newsfirstlive.com Source link