ಬಿಜೆಪಿಯಲ್ಲಿ ಖಾತೆ ಕ್ಯಾತೆ – ಭಿನ್ನಮತದ ರಿಪೋರ್ಟ್ ಪಡೆದ ಉಸ್ತುವಾರಿ ಅರುಣ್ ಸಿಂಗ್

ನವದೆಹಲಿ/ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ವಿದ್ಯಮಾನಗಳ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ಪಡೆದುಕೊಂಡಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆ ನಿರ್ಧಾರ ವಿಚಾರ, ಎಂಟಿಬಿ ಒತ್ತಡ, ರಾಮದಾಸ್ ಮುನಿಸು, ಶ್ರೀರಾಮುಲು ಬೇಸರ, ಅಪ್ಪಚ್ಚು ರಂಜನ್ ಬೆಂಬಲಿಗರ ಪ್ರತಿಭಟನೆ ಈ ಎಲ್ಲಾ ವಿದ್ಯಮಾನಗಳ ಮಾಹಿತಿಯನ್ನು ಅರುಣ್‍ಸಿಂಗ್ ಅವರು ಸಿಎಂ, ರಾಜ್ಯ ಬಿಜೆಪಿ ಘಟಕದಿಂದ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಸದ್ಯ ರಾಜ್ಯ ಬಿಜೆಪಿಯಲ್ಲೀಗ ವರಿಷ್ಠರಿಗೆ 3 ತಲೆನೋವು ಶುರುವಾಗಿದೆ. ಆನಂದ್ ಸಿಂಗ್, ಎಂಟಿಬಿ ನಾಗರಾಜ್, ಶ್ರೀರಾಮುಲು ಈ ಮೂವರು ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣರಾಗಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಬಳಿಕ ಪಕ್ಷದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಅನ್ನೋವಂತಾಗಿದೆ. ರಾಜ್ಯ ಬಿಜೆಪಿ ಬಿಕ್ಕಟ್ಟಿನ ಬಗ್ಗೆ ವರಿಷ್ಠರೂ ಮೌನವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಖಾತೆ ಕ್ಯಾತೆ ಭುಗಿಲೆದ್ದಿದ್ದು, ಪ್ರಬಲ ಖಾತೆಗೆ ಸಚಿವ ಆನಂದ್ ಸಿಂಗ್ ಪಟ್ಟುಹಿಡಿದಿದ್ದಾರೆ. ತಾನು ಬಯಸಿದ ಖಾತೆ ಸಿಕ್ಕಿಲ್ಲವೆಂದು ಸಚಿವರು ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಹೊಸಪೇಟೆಯಲ್ಲಿರುವ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸಿದ್ದಾರೆ. ಕ್ರೇನ್ ಬಳಸಿ ಕಚೇರಿಯ ಬೋರ್ಡ್ ತೆಗೆಸಿದ ಆನಂದ್ ಸಿಂಗ್, ಸಂಪೂರ್ಣ ಕಚೇರಿ ಬಂದ್ ಮಾಡಲು ಮುಂದಾಗಿದ್ದಾರೆ. ಕಳೆದ 14 ವರ್ಷಗಳಿಂದ ಅಚಿವರು ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ರಾಜೀನಾಮೆಗೆ ಮುಂದಾಗಿರೋ ಆನಂದ್ ಸಿಂಗ್ ಸಿಎಂ ಕರೆಗೂ ಡೋಂಟ್ ಕೇರ್!

blank

ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರು ಇಂಧನ ಅಥವಾ ಲೋಕೋಪಯೋಗಿ ಅಥವಾ ಗಣಿ ಇಲಾಖೆ ಬಯಸಿದ್ದರು. ಆದರೆ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದ್ದು, ಇದೇ ವಿಚಾರಕ್ಕೆ ಆನಂದ್ ಸಿಂಗ್ ಅವರು ಸಿಟ್ಟಾಗಿದ್ದು, ರಾಜೀನಾಮೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Source: publictv.in Source link