ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನನ್ನ ಲವರ್.. ಅವರದ್ದು ನನ್ನದ್ದು ಪ್ರೇಮಾ -ರಾಮದಾಸ್​

ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನನ್ನ ಲವರ್.. ಅವರದ್ದು ನನ್ನದ್ದು ಪ್ರೇಮಾ -ರಾಮದಾಸ್​

ಮೈಸೂರು: ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನನ್ನ ಲವರ್​. ಅವರದ್ದು ನನ್ನದ್ದು ಪ್ರೇಮಾ ಅಷ್ಟೇ ಎಂದು ಮೈಸೂರಿನ ಕೆ.ಆರ್​​ ಕ್ಷೇತ್ರದ ಶಾಸಕ ಎಸ್​​​.ಎ ರಾಮದಾಸ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಪಕ್ಷದ ನಾಯಕರು, ಸಂಘದ ನಾಯಕರು ನೀನು ಮಂತ್ರಿ ಆಗ್ತಿಯಾ.. ಒಳ್ಳೆ ಕೆಲಸ ಮಾಡು ಅಂತಾ ಹೇಳಿದ್ದರು. ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇತ್ತು. ಆದರೆ ಎಲ್ಲೋ ಕೊನೆ ನಿಮಿಷದಲ್ಲಿ ಕೈ ಬಿಟ್ಟಾಗ ನಾನು ಅವರಿಗೆ ಫೋನ್​ ಮಾಡಿ ಹೇಳಿದ್ದೇನೆ.

ಯಾಕ್ರಾಪ್ಪಾ ನನ್ನ ಹೆಸರನ್ನು ಪಟ್ಟಿಯಿಂದ ಕೈ ಬಿಡಿಸಿದ್ರಿ..? ಇದರಿಂದ ನಿಮಗೆ ಏನಾದ್ರು ಸಂತೋಷ ಆಯ್ತಾ..? ಮೈಸೂರು ಜಿಲ್ಲೆಯ ಒಳ್ಳೆದು ಆಯ್ತಾ..? ಅಂತಾ ನಾನೇ ಅವರಿಗೆ ಫೋನ್ ಮಾಡಿ ಕೇಳಿದ್ದೀನಿ. ಇದನ್ನು ನಾನು ದುಃಖದಿಂದ ಕೇಳಲಿಲ್ಲ. ಅವರಿಗೆ ಗೊತ್ತಾಗಿದೆ ಅಲ್ವಾ..? ಅವರಿಗೆ ಫೋನ್​ ಮಾಡಿದ್ದೀನಿ ಎಂದರು. ಈ ವೇಳೆ ಯಾರು ಮುಖಂಡರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನಗೆ ಸಚಿವ ಸ್ಥಾನ ತಪ್ಪಿಸಿದ್ದು ನನ್ನ ಲವರ್​. ಅವರದ್ದು ನನ್ನದ್ದು ಪ್ರೇಮಾ ಅಷ್ಟೇ. ಮುಂದಿನ ದಿನಗಳಲ್ಲಿ ಯಾವ ನಿರೀಕ್ಷೆಯನ್ನು ಇಟ್ಟುಕೊಂಡು ಹೋಗುವವ ಅಲ್ಲ. ನನಗೆ ಕೆ.ಆರ್ ಕ್ಷೇತ್ರವೇ ಮುಖ್ಯ.. ಕ್ಷೇತ್ರವನ್ನು ಒಂದು ಮಾದರಿಯಾಗಿ ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Source: newsfirstlive.com Source link