ನಿಮಗಿದು ಗೊತ್ತಾ? 1900 ಒಲಿಂಪಿಕ್ಸ್​ನಲ್ಲಿ ನಡೆದಿತ್ತು ಕ್ರಿಕೆಟ್ ಪಂದ್ಯ.. ಯಾರಿಗೆ ಒಲಿದಿತ್ತು ಚಿನ್ನದ ಪದಕ?

ನಿಮಗಿದು ಗೊತ್ತಾ? 1900 ಒಲಿಂಪಿಕ್ಸ್​ನಲ್ಲಿ ನಡೆದಿತ್ತು ಕ್ರಿಕೆಟ್ ಪಂದ್ಯ.. ಯಾರಿಗೆ ಒಲಿದಿತ್ತು ಚಿನ್ನದ ಪದಕ?

ನವದೆಹಲಿ: ಟೋಕಿಯೋ ಒಲಿಂಪಿಕ್ಸ್-2020 ಅದ್ದೂರಿಯಾಗಿ ತೆರೆ ಬಿದ್ದಿದೆ. ನಿಮ್ಗೆ ಒಂದು ವಿಷ್ಯ ಗೊತ್ತಾ? ಈ ಹಿಂದೆ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಕೂಡ ಆಡಿಸಲಾಗಿತ್ತು. ಅದರಂತೆ ಇದೀಗ ಮತ್ತೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಕೂಡ ಸೇರಿಸಬೇಕು ಎಂಬ ಉದ್ದೇಶವನ್ನ ಹೊಂದಿದೆ. ಅದರಂತೆ 2028 ಲಾಸ್​​ ಏಂಜಿಲೀಸ್​​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಬೇಕು ಅಂತಾ ಒತ್ತಾಯಿಸಲು ಐಸಿಸಿ ಚಿಂತನೆ ನಡೆಸಿದೆ.

ಐಸಿಸಿ ಈ ನಿರ್ಧಾರವು ಕ್ರಿಕೆಟ್ ಪ್ರೇಮಿಗಳನ್ನ ಬಡಿದೆಬ್ಬಿಸಿದಂತಾಗಿದೆ. ಐಸಿಸಿ ಕನಸಿನಂತೆಯೇ ಒಲಿಂಪಿಕ್​​ನಲ್ಲಿ ಕ್ರಿಕೆಟ್​ಗೆ ಸ್ಥಾನ ಸಿಗಲಿ, ಮೆಗಾ ಕ್ರೀಡಾ ಲೋಕದಲ್ಲಿ ಕ್ರಿಕೆಟ್​ ವಿಜೃಂಭಿಸಲಿ ಅಂತಾ ಅಭಿಮಾನಿಗಳು ಪ್ರಾರ್ಥನೆಯನ್ನ ಆರಂಭಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ ಅಧ್ಯಕ್ಷ ಗ್ರೇಗ್ ಬಾಕ್ರ್ಲೆ.. 1900ರಲ್ಲಿ ಪ್ಯಾರಿಸ್​​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್​ ತಂಡಗಳು ಭಾಗವಹಿಸಿದ್ದವು. ಆದರೆ ನಂತರದ ದಿನಗಳಲ್ಲಿ ಕ್ರಿಕೆಟ್ ಅನ್ನ ಕೈಬಿಡಲಾಯಿತು. ಅಮೆರಿಕಾದಲ್ಲಿ 3 ಮಿಲಿಯನ್ ಕ್ರಿಕೆಟ್ ಪ್ರೇಮಿಗಳು ನೆಲೆಸಿದ್ದಾರೆ. ಅವರ ಒಕ್ಕೊರಲಿನ ಅಭಿಪ್ರಾಯದ ಮೇಲೆ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಲು ಮುಂದಾಗಿದ್ದೇವೆ ಅಂತಾ ತಿಳಿಸಿದ್ದಾರೆ.

ಕ್ರಿಕೆಟ್​ ಅನ್ನ ಒಲಿಂಪಿಕ್ಸ್​ಗೆ ಸೇರಿಸಬೇಕು ಅನ್ನೋ ಕೂಗು ಮೊದಲಿನಿಂದಲೂ ಇದೆ. 1896 ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿಯೇ ಸೇರಿಸಲು ನಿರ್ಧರಿಸಲಾಗಿತ್ತು. ಆದರೆ ಭಾಗವಹಿಸುವವರ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ನಂತರ 4 ವರ್ಷಗಳ ನಂತರ ಪ್ಯಾರಿಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪದಾರ್ಪಣೆ ಮಾಡಿತ್ತು. ಐಸಿಸಿ ನೀಡಿರುವ ಮಾಹಿತಿ ಪ್ರಕಾರ, ಗ್ರೇಟ್ ಬ್ರಿಟನ್, ಫ್ರಾನ್ಸ್, ನೆದರ್ಲ್ಯಾಂಡ್​ ಮತ್ತು ಬೆಲ್ಜಿಯಂ ತಂಡಗಳು ಒಲಿಂಪಿಕ್ಸ್​ನಲ್ಲಿ ಆಡಿಸಲು ಪ್ಲಾನ್ ಮಾಡಲಾಗಿತ್ತು.

ಇನ್ನು 1900 ಒಲಿಂಪಿಕ್ಸ್​ನಲ್ಲಿ ಗ್ರೇಟ್ ಬ್ರಿಟನ್ 158 ರನ್​​ಗಳಿಂದ ಫ್ರಾನ್ಸ್​ ತಂಡವನ್ನ ಮಣಿಸಿತ್ತು. ಮೊದಲ ಬ್ಯಾಟ್​​ ಮಾಡಿದ ಬ್ರಿಟನ್​​ 117 ರನ್​ಗಳಿಸಿತ್ತು. ಈ ಸಂದರ್ಭದಲ್ಲಿ ಫೆಡರಿಕ್ ಕಮ್ಮಿಂಗ್ ಅನ್ನೋರು ಅತ್ಯಧಿಕ 38 ರನ್​ಗಳಿಸಿದ್ರು. ಇದಕ್ಕೆ ಉತ್ತರವಾಗಿ ಫಸ್ಟ್​ ಇನ್ನಿಂಗಸ್​ ಆರಂಭಿಸಿದ್ದ ಫ್ರಾನ್ಸ್​ 78 ರನ್​ಗಳಿಸಿ ಹಿನ್ನಡೆ ಅನುಭವಿಸಿತ್ತು. ವಿಶೇಷ ಅಂದ್ರೆ ಲಂಡನ್​​ ಫೆಡರಿಕ್ ಅನ್ನೋ ಬೌಲರ್ ಬರೋಬ್ಬರಿ 7 ವಿಕೆಟ್​ ಪಡೆದುಕೊಂಡಿದ್ದರು. ನಂತರ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದ ಬ್ರಿಟನ್​ 145 ರನ್​ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಫ್ರಾನ್ಸ್​ ಎರಡನೇ ಇನ್ನಿಂಗ್ಸ್​ನಲ್ಲಿ 26 ರನ್​ಗಳಿಸಿ ಸೋಲನ್ನ ಅನುಭವಿಸಿತು.

Source: newsfirstlive.com Source link