ಗರ್ಭಿಣಿಯಾದಾಗ ಸೆಕ್ಸ್ ಮೇಲಿನ ಆಸಕ್ತಿ ಕಳೆದುಕೊಂಡೆ: ಕರೀನಾ

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ತಾವು ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಕರೀನಾ ಕಫೂರ್ ಅವರ ‘ಪ್ರೆಗ್ನೆನ್ಸಿ ಬೈಬಲ್’ ಪುಸ್ತಕ ನಿನ್ನೆಯಷ್ಟೆ ರಿಲೀಸ್ ಆಯಿತು. ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಕರೀನಾ, ಗರ್ಭಿಣಿಯಾದ ಸಂದರ್ಭದಲ್ಲಿ ತಾನು ಅನುಭವಿಸಿದ ಕಷ್ಟ, ಸಂತೋಷದ ಕುರಿತು ಮಾತನಾಡಿದರು. ಇದನ್ನೂ ಓದಿ: ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

ಮಹಿಳೆ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಯ ಪರಿಸ್ಥಿತಿ ಬಹುತೇಕ ಮಂದಿಗೆ ಅರ್ಥ ಆಗುವುದೇ ಇಲ್ಲ. ಆಕೆಯ ತಳಮಳ, ಭಾವನೆಗಳು, ಮಾನಸಿಕ ಉದ್ವೇಗ, ಮೂಡ್ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಇರುತ್ತವೆ. ಇಂಥಾ ಸಂದರ್ಭದಲ್ಲಿ ಆಕೆಯ ಜೊತೆ ಇರುವ ಪತಿ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ ಕರೀನಾ, ತಮ್ಮ ಪತಿ ಸೈಫ್ ಅಲಿ ಖಾನ್ ತುಂಬಾ ಚೆನ್ನಾಗಿ ಹೊಂದಿಕೊಂಡರು ಎಂದು ಸೈಫ್ ಬಗ್ಗೆ ಮೆಚ್ಚುಗೆ ಮಾತನ್ನಾಡಿದ್ದಾರೆ.

ದೈನಂದಿನ ಬದುಕಿನಲ್ಲಿ ದಂಪತಿ ನಡುವೆ ಸೆಕ್ಸ್ ಬಾಂಧವ್ಯದ ಕೊಂಡಿಯಾಗಿ ಬೆಸೆಯುತ್ತದೆ ನಿಜ. ಆದರೆ ಅದು ಇಬ್ಬರೂ ಸಂಗಾತಿಗಲ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾರೇ ಒಬ್ಬ ಸಂಗಾತಿಗೆ ಆ ಕ್ಷಣದಲ್ಲಿ ಸೆಕ್ಸ್ ಮಾಡಲು ಆಸಕ್ತಿ ಇಲ್ಲದೇ ಹೋದಲ್ಲಿ ಮತ್ತೊಬ್ಬರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ದಾಂಪತ್ಯ ಅರ್ಥ ಪೂರ್ಣವಾಗುತ್ತದೆ. ನನ್ನ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳನ್ನು ಬರೆದಿದ್ದೇನೆ ಎಂದು ಕರೀನ ಅಭಿಪ್ರಾಯ ಪಟ್ಟಿದ್ದಾರೆ.

Source: publictv.in Source link