2028ರ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ವಿಜೃಂಭಿಸಲು ಐಸಿಸಿ ಪ್ಲಾನ್; ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತೆ ಚಿಗುರಿದ ಕನಸು

2028ರ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ವಿಜೃಂಭಿಸಲು ಐಸಿಸಿ ಪ್ಲಾನ್; ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತೆ ಚಿಗುರಿದ ಕನಸು

ನವದೆಹಲಿ: ಟೋಕಿಯೋ ಒಲಿಂಪಿಕ್ಸ್-2020 ಅದ್ಧೂರಿಯಾಗಿ ತೆರೆ ಬಿದ್ದಿದೆ. ಇದೀಗ ಮತ್ತೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಕೂಡ ಸೇರಿಸಬೇಕು ಎಂಬ ಉದ್ದೇಶವನ್ನ ಹೊಂದಿದೆ. ಅದರಂತೆ 2028 ಲಾಸ್​​ ಏಂಜಿಲೀಸ್​​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಬೇಕು ಅಂತಾ ಒತ್ತಾಯಿಸಲು ಐಸಿಸಿ ಚಿಂತನೆ ನಡೆಸಿದೆ.

ಐಸಿಸಿ ಈ ನಿರ್ಧಾರವು ಕ್ರಿಕೆಟ್ ಪ್ರೇಮಿಗಳನ್ನ ಬಡಿದೆಬ್ಬಿಸಿದಂತಾಗಿದೆ. ಐಸಿಸಿ ಕನಸಿನಂತೆಯೇ ಒಲಿಂಪಿಕ್​​ನಲ್ಲಿ ಕ್ರಿಕೆಟ್​ಗೆ ಸ್ಥಾನ ಸಿಗಲಿ, ಮೆಗಾ ಕ್ರೀಡಾ ಲೋಕದಲ್ಲಿ ಕ್ರಿಕೆಟ್​ ವಿಜ್ರಂಭಿಸಲಿ ಅಂತಾ ಅಭಿಮಾನಿಗಳು ಪ್ರಾರ್ಥನೆಯನ್ನ ಆರಂಭಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ ಅಧ್ಯಕ್ಷ ಗ್ರೇಗ್ ಬಾಕ್ರ್ಲೆ.. 1900ರಲ್ಲಿ ಪ್ಯಾರಿಸ್​​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್​ ತಂಡಗಳು ಭಾಗವಹಿಸಿದ್ದವು. ಆದರೆ ನಂತರದ ದಿನಗಳಲ್ಲಿ ಕ್ರಿಕೆಟ್ ಅನ್ನ ಕೈಬಿಡಲಾಯಿತು. ಅಮೆರಿಕಾದಲ್ಲಿ 3 ಮಿಲಿಯನ್ ಕ್ರಿಕೆಟ್ ಪ್ರೇಮಿಗಳು ನೆಲೆಸಿದ್ದಾರೆ. ಅವರ ಒಕ್ಕೊರಲಿನ ಅಭಿಪ್ರಾಯದ ಮೇಲೆ 2028ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಲು ಮುಂದಾಗಿದ್ದೇವೆ ಅಂತಾ ತಿಳಿಸಿದ್ದಾರೆ.

Source: newsfirstlive.com Source link