‘ನನ್ನದು ಅವರದ್ದು ಪ್ರೇಮಾ’ ಸಚಿವ ಸ್ಥಾನ ತಪ್ಪಿದ್ದರ ಬಗ್ಗೆ ರಾಮದಾಸ್ ಹೇಳಿಕೆ

‘ನನ್ನದು ಅವರದ್ದು ಪ್ರೇಮಾ’ ಸಚಿವ ಸ್ಥಾನ ತಪ್ಪಿದ್ದರ ಬಗ್ಗೆ ರಾಮದಾಸ್ ಹೇಳಿಕೆ

ಮೈಸೂರು: ನನಗೆ ಸಚಿವ ಸ್ಥಾನ ತಪ್ಪಿಸಿದ ಬಗ್ಗೆ ಮಾತನಾಡಿರುವ  ಮೈಸೂರಿನ ಕೆ.ಆರ್​​ ಕ್ಷೇತ್ರದ ಶಾಸಕ ಎಸ್​​​.ಎ ರಾಮದಾಸ್, ತಮಗೆ ಮಂತ್ರಿ ಸ್ಥಾನ ತಪ್ಪಿಸಿದ ಮುಖಂಡರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಪಕ್ಷದ ನಾಯಕರು, ಸಂಘದ ನಾಯಕರು ನೀನು ಮಂತ್ರಿ ಆಗ್ತಿಯಾ.. ಒಳ್ಳೆ ಕೆಲಸ ಮಾಡು ಅಂತಾ ಹೇಳಿದ್ದರು. ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇತ್ತು. ಆದರೆ ಎಲ್ಲೋ ಕೊನೆ ನಿಮಿಷದಲ್ಲಿ ಕೈ ಬಿಟ್ಟಾಗ ನಾನು ಅವರಿಗೆ ಫೋನ್​ ಮಾಡಿ ಹೇಳಿದ್ದೇನೆ.

ಯಾಕ್ರಪ್ಪಾ ನನ್ನ ಹೆಸರನ್ನು ಪಟ್ಟಿಯಿಂದ ಕೈ ಬಿಡಿಸಿದ್ರಿ..? ಇದರಿಂದ ನಿಮಗೆ ಏನಾದ್ರು ಸಂತೋಷ ಆಯ್ತಾ..? ಮೈಸೂರು ಜಿಲ್ಲೆಯ ಒಳ್ಳೆದು ಆಯ್ತಾ..? ಅಂತಾ ನಾನೇ ಅವರಿಗೆ ಫೋನ್ ಮಾಡಿ ಕೇಳಿದ್ದೀನಿ. ಇದನ್ನು ನಾನು ದುಃಖದಿಂದ ಕೇಳಲಿಲ್ಲ. ಅವರಿಗೆ ಗೊತ್ತಾಗಿದೆ ಅಲ್ವಾ..? ಅವರಿಗೆ ಫೋನ್​ ಮಾಡಿದ್ದೀನಿ ಎಂದರು. ಈ ವೇಳೆ ಯಾರು ಮುಖಂಡರು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವರದ್ದು ನನ್ನದು ಪ್ರೇಮಾ ಅಷ್ಟೇ. ಮುಂದಿನ ದಿನಗಳಲ್ಲಿ ಯಾವ ನಿರೀಕ್ಷೆಯನ್ನು ಇಟ್ಟುಕೊಂಡು ಹೋಗುವವ ಅಲ್ಲ. ನನಗೆ ಕೆ.ಆರ್ ಕ್ಷೇತ್ರವೇ ಮುಖ್ಯ.. ಕ್ಷೇತ್ರವನ್ನು ಒಂದು ಮಾದರಿಯಾಗಿ ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Source: newsfirstlive.com Source link