ಕೊಪ್ಪಳದಲ್ಲಿ 2 ಲಾರಿಗಳ ಮಧ್ಯೆ ಭೀಕರ ಅಪಘಾತ; ನಾಲ್ವರು ಬದುಕುಳಿದಿದ್ದೇ ಪವಾಡ

ಕೊಪ್ಪಳದಲ್ಲಿ 2 ಲಾರಿಗಳ ಮಧ್ಯೆ ಭೀಕರ ಅಪಘಾತ; ನಾಲ್ವರು ಬದುಕುಳಿದಿದ್ದೇ ಪವಾಡ

ಕೊಪ್ಪಳ: ತಾಲೂಕಿನ ಹಲಗೇರಿಯ ಮಿಲೇನಿಯಂ ಶಾಲೆ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡು ಲಾರಿಗಳು ನುಜ್ಜುಗುಜ್ಜಾಗಿವೆ.

ಮಧ್ಯರಾತ್ರಿ ಸರಿ ಸುಮಾರು 1:30ಕ್ಕೆ ದುರ್ಘಟನೆ ಸಂಭವಿಸಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ಲಾರಿಯಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಸತತ ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ನಾಲ್ವರನ್ನ ರಕ್ಷಣೆ ಮಾಡಿದ್ದಾರೆ. ಮಧ್ಯಪ್ರದೇಶ ಹಾಗೂ ಬೆಂಗಳೂರು ಮೂಲದ ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಒಂದು ಲಾರಿಯಲ್ಲಿ ಮೂರು ಜನ, ಇನ್ನೊಂದು ಲಾರಿಯಲ್ಲಿ ಓರ್ವ ಚಾಲಕ ಇದ್ದರು ಎಂದು ತಿಳಿದುಬಂದಿದೆ.

ಎರಡು ಲಾರಿಗಳು ಹೊಸಪೇಟೆ ಕಡೆ ಹೊರಟಿದ್ದವು ಎನ್ನಲಾಗಿದೆ. ಓವರ್​​ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Source: newsfirstlive.com Source link