ಆನಂದ್ ಸಿಂಗ್ ಮೂರು ದಶಕದ ಗೆಳೆಯ, ಇಂದು ಮಾತಾಡ್ತೀನಿ: ಬೊಮ್ಮಾಯಿ

ಬೆಂಗಳೂರು: ಸಚಿವ ಆನಂದ್ ಸಿಂಗ್ ನನಗೆ ಮೂರು ದಶಕದ ಗೆಳೆಯ. ಇಂದು ಅವರನ್ನು ಬೆಂಗಳೂರಿಗೆ ಕರೆದಿದ್ದು, ಮಾತನಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ಜೊತೆ ನಿನ್ನೆ ಮಾತಾಡಿದ್ದೀನಿ. ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಜೊತೆ ಮಾತಾಡ್ತೀನಿ. ಅವರು ಎಲ್ಲಾ ವಿಚಾರ ಹೇಳಿದ್ದಾರೆ ಎಂದರು.

 

ಆನಂದ್ ಸಿಂಗ್ ಮೊನ್ನೆ ಭಾನುವಾರ ರಾಜೀನಾಮೆ ಪತ್ರ ಕೊಟ್ಟಿಲ್ಲ. ರಾಜೀನಾಮೆ ಕೊಡೋದಾಗಿ ಹೇಳಿದ್ರಷ್ಟೇ ಎಂದು ಹೇಳುವ ಮೂಲಕ ಖಾತೆ ಬದಲಾವಣೆ ಮಾಡಿಕೊಡುವ ಬಗ್ಗೆ ಸಿಎಂ ಸ್ಪಷ್ಟತೆ ಕೊಟ್ಟಿಲ್ಲ. ನಮ್ಮ ನಿರ್ಣಯ ಏನು ಅಂತ ಆಮೇಲೆ ಗೊತ್ತಾಗುತ್ತೆ. ನಾನು ಈ ವಿಚಾರಗಳನ್ನು ಹೈಕಮಾಂಡ್‍ಗೆ ತಿಳಿಸಿಲ್ಲ ಎಂದು ಹೇಳಿದರು.

ಆನಂದ್ ಸಿಂಗ್ ವಿಚಾರ ಏನು ಅಂತ ನನಗೆ ಗೊತ್ತಿದೆ. ಮತ್ತೆ ಭೇಟಿ ಮಾಡಿ ಎಂದು ಹೇಳಿದ್ದೇನೆ. ಅವರು ಯಾವಾಗಲಾದರೂ ಬಂದು ಭೇಟಿ ಮಾಡಲಿ. ಅವರ ಜೊತೆ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಕೈಕೊಟ್ರಾ ಬಿಎಸ್‍ವೈ – ಸಹಾಯಕ್ಕೆ ಹೈಕಮಾಂಡ್‍ಗೆ ಸಿಎಂ ಮೊರೆ

ಇದೇ ವೇಳೆ ಖಾತೆ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಏನು ತೀರ್ಮಾನ ಮಾಡಿದ್ದೇನೆ ಅಂತ ನನಗೆ ಗೊತ್ತು. ಅದನ್ನೆಲ್ಲಾ ನಿಮ್ಮ ಮುಂದೇ ಹೇಳಲ್ಲ ಎಂದು ಸ್ಪಷ್ಟವಾಗಿ ಉತ್ತರಿಸದೇ ಸಿಎಂ ತೆರಳಿದರು.

Source: publictv.in Source link