ಕೋವ್ಯಾಕ್ಸಿನ್​-ಕೋವಿಶೀಲ್ಡ್​ ಮಿಕ್ಸಿಂಗ್ ಅಧ್ಯಯನಕ್ಕೆ DCGI ಅನುಮೋದನೆ

ಕೋವ್ಯಾಕ್ಸಿನ್​-ಕೋವಿಶೀಲ್ಡ್​ ಮಿಕ್ಸಿಂಗ್ ಅಧ್ಯಯನಕ್ಕೆ DCGI ಅನುಮೋದನೆ

ನವದೆಹಲಿ: ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಮಿಕ್ಸಿಂಗ್ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಡ್ರಗ್ಸ್​ ಕಂಟ್ರೋಲರ್​ ಜನರಲ್ ಆಫ್ ಇಂಡಿಯಾ, ಲಸಿಕೆಯ ಮಿಕ್ಸಿಂಗ್ ಅಧ್ಯಯನಕ್ಕೆ ಅನುಮತಿ ನೀಡಿದೆ. ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು (ಸಿಎಂಸಿ)ನಲ್ಲಿ ವ್ಯಾಕ್ಸಿನ್ ಮಿಕ್ಸಿಂಗ್ ಕ್ಲಿನಿಕಲ್ ಪ್ರಯೋಗ ಮತ್ತು ಅಧ್ಯಯನ ನಡೆಯಲಿದೆ.

ಇನ್ನು ಜುಲೈ 29 ರಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO)ನ ಸಬ್ಜೆಕ್ಟ್​ ಎಕ್ಸ್​​ಪರ್ಟ್​ ಕಮೀಟಿಯು ವ್ಯಾಕ್ಸಿನ್​ಗಳ ಮಿಕ್ಸಿಂಗ್​ ಅಧ್ಯಯನ ನಡೆಸಲು ಶಿಫಾರಸು ಮಾಡಿತ್ತು. ಈ ಸಮಿತಿಯು ಕೊವಾಕ್ಸಿನ್ ಮತ್ತು ಕೋವಿಶೀಲ್ಡ್ ಮಿಕ್ಸಿಂಗ್​ ವ್ಯಾಕ್ಸಿನ್​ ಪ್ರಯೋಗ ಮಾಡಲು ಆರೋಗ್ಯವಂತ 300 ಸ್ವಯಂಸೇವಕರನ್ನು ಬಳಸಿಕೊಂಡು ಕ್ಲಿನಿಕಲ್ ಪ್ರಯೋಗ ಮತ್ತು ಅಧ್ಯಯನ ನಡೆಸುವಂತೆ ಶಿಫಾರಸು ಮಾಡಿತ್ತು. ಅದರಂತೆ ಡಿಸಿಜಿಐ ಈಗ ಅನುಮೋದನೆ ನೀಡಿದೆ.

ಕೊರೊನಾ ವ್ಯಾಕ್ಸಿನ್​​ ಮಿಕ್ಸಿಂಗ್​​ ಹಾಗೂ ಮ್ಯಾಚಿಂಗ್​​ ಸಂಬಂಧ ಪ್ರಮುಖ ಪ್ರಯೋಗಗಳು ಆರಂಭವಾಗಿವೆ. ಭಾರತದಲ್ಲಿ ಸದ್ಯ ಕೋವಿಶೀಲ್ಡ್​​ ಹಾಗೂ ಕೋವ್ಯಾಕ್ಸಿನ್​ ಲಸಿಕೆ ನೀಡಲಾಗುತ್ತಿದೆ. ಸದ್ಯ ಈ ಎರಡು ಲಸಿಕೆಗಳ ಮಿಕ್ಸಿಂಗ್​ ಪ್ರಯೋಗದ ಕುರಿತು ಮಾಹಿತಿ ಹಂಚಿಕೊಂಡಿರುವ ಐಸಿಎಂಆರ್​, ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಅಂತಾ ಆಗಸ್ಟ್​ 8 ರಂದು ಹೇಳಿತ್ತು. ಇದರ ಬೆನ್ನಲ್ಲೇ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮತಿ ನೀಡಿದೆ.

ಇನ್ನು ಐಸಿಎಂಆರ್​ನ ಅಧ್ಯಯನದಲ್ಲಿ ಲಸಿಕೆಗಳ ಮಿಶ್ರಣದಿಂದ ಉತ್ತಮ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ಅಧ್ಯಯನದಲ್ಲಿ ದೃಢಪಟ್ಟಿತ್ತು. ಪ್ರಯೋಗದಿಂದ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದೆ.

ಇದನ್ನೂ ಓದಿ: ಕೋವಿಶೀಲ್ಡ್, ಕೋವ್ಯಾಕ್ಸಿನ್​​ ಪೈಕಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ಅಧ್ಯಯನ ವರದಿ

ಇದನ್ನೂ ಓದಿ: ಕೋವಿಶೀಲ್ಡ್​-ಕೋವ್ಯಾಕ್ಸಿನ್ ಮಿಕ್ಸಿಂಗ್ ಪ್ರಯೋಗ ಯಶಸ್ವಿ -ಗುಡ್ ರಿಸಲ್ಟ್​ ಎಂದ ICMR

Source: newsfirstlive.com Source link