ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಮಹತ್ವದ ಬದಲಾವಣೆ; 3 ಆಟಗಾರರಿಗೆ ಕೊಕ್ ಪಕ್ಕಾ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಮಹತ್ವದ ಬದಲಾವಣೆ; 3 ಆಟಗಾರರಿಗೆ ಕೊಕ್ ಪಕ್ಕಾ

ನಾಟಿಂಗ್​ಹ್ಯಾಮ್​ ಟೆಸ್ಟ್​ ಪಂದ್ಯದಲ್ಲಿ ಭಾರತದ ಸಂಘಟಿತ ಹೋರಾಟದ ಹೊರತಾಗಿಯೂ, 2ನೇ ಟೆಸ್ಟ್​ ಪಂದ್ಯ ಹಲವು ಬದಲಾವಣೆಗೆ ಸಾಕ್ಷಿಯಾಗೋ ಸಾಧ್ಯತೆಯಿದೆ. ಮುಖ್ಯವಾಗಿ ಮೂವರು ಆಟಗಾರರಿಗೆ ರೆಸ್ಟ್​ ನೀಡೋಕೆ ಮ್ಯಾನೇಜ್​ಮೆಂಟ್​ ಪ್ಲಾನ್​ ರೂಪಿಸಿದೆ.

blank

ನಾಟಿಂಗ್​ಹ್ಯಾಂಮ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ವೈಯಕ್ತಿಕ ಪ್ರದರ್ಶನದ ಹೊರತಾಗಿ ತಂಡವಾಗಿ ಟೀಮ್​ ಇಂಡಿಯಾ ಉತ್ತಮ ಪ್ರದರ್ಶನವನ್ನೇ ನೀಡಿದೆ. ಬೌಲರ್​ಗಳು ಇಂಗ್ಲೆಂಡ್​​ ತಂಡವನ್ನ 2 ಬಾರಿ ಆಲೌಟ್​​ ಮಾಡಿದ್ರೆ, ಬ್ಯಾಟ್ಸ್​ಮನ್​ ಆತಿಥೇಯ ತಂಡಕ್ಕಿಂತ ಹೆಚ್ಚು ರನ್​ ಕಲೆ ಹಾಕುವಲ್ಲಿ ಯಶಸ್ಸು ಕಂಡರು. ಹೀಗಾಗಿ ಮುಂದಿನ ಟೆಸ್ಟ್​ ಪಂದ್ಯಕ್ಕೂ ಇದೇ ಪ್ಲೇಯಿಂಗ್​-XI ಫಿಕ್ಸ್​​ ಎಂದೇ ಹೇಳಲಾಗಿತ್ತು. ಆದ್ರೆ, ಲಾರ್ಡ್ಸ್​​​​​ ಟೆಸ್ಟ್​ನಲ್ಲಿ ಪ್ರಮುಖ ಮೂರು ಬದಲಾವಣೆ ಮಾಡೋಕೆ ಮ್ಯಾನೇಜ್​ಮೆಂಟ್​ ಮುಂದಾಗಿದೆ.

ಮೊದಲ ಟೆಸ್ಟ್​ನಲ್ಲಿ ಅನುಭವಿ ಇಶಾಂತ್​ ಶರ್ಮಾ ಅಲಭ್ಯತೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊಹಮ್ಮದ್​ ಸಿರಾಜ್​ ಸಖತ್​ ಪರ್ಫಾಮೆನ್ಸ್​ ನೀಡಿದ್ರು. ಹಾಗಿದ್ರೂ 2ನೇ ಟೆಸ್ಟ್​ನಲ್ಲಿ ಇಶಾಂತ್​ ಶರ್ಮಾಗೆ ಮಣೆ ಹಾಕೋಕೆ ಕೊಹ್ಲಿ ನಿರ್ಧರಿಸಿದ್ದಾರಂತೆ. ಸರಣಿ ಗೆಲುವಿನ ಮೇಲೆ ಗುರಿ ಇಟ್ಟಿರುವ ಕೊಹ್ಲಿ ಅನಾನುಭವಿ ಸಿರಾಜ್​ಗಿಂತ, ಅನುಭವಿ ಇಶಾಂತ್​ಗೆ ಮಣೆ ಹಾಕೋಕೆ ಸಜ್ಜಾಗಿದ್ದಾರೆ. 2018ರ ಪ್ರವಾಸದಲ್ಲಿ ಇಶಾಂತ್​ 13 ವಿಕೆಟ್​ ಕಬಳಿಸಿದ್ದು ಕೂಡ ಆಯ್ಕೆಗೆ ಕಾರಣವಾಗಿದೆ.

blank

ಟ್ರೆಂಟ್​ಬ್ರಿಡ್ಜ್​ನಲ್ಲಿ ಬ್ಯಾಟಿಂಗ್​, ಬೌಲಿಂಗ್​ ಎರಡನ್ನೂ ಗಮನದಲ್ಲಿರಿಸಿಕೊಂಡಿದ್ದ ಕೊಹ್ಲಿ, ಶಾರ್ದೂಲ್​ ಠಾಕೂರ್​ಗೆ ಮಣೆ ಹಾಕಿದ್ರು. ಆದ್ರೆ ಬೌಲಿಂಗ್​ನಲ್ಲಿ ಮಿಂಚಿದ ಶಾರ್ದೂಲ್​, ಬ್ಯಾಟಿಂಗ್​ನಲ್ಲಿ ಸೊನ್ನೆ ಸುತ್ತಿದ್ರು. ಹೀಗಾಗಿ ಲಾರ್ಡ್ಸ್​​ ಪಿಚ್​​​ ಗಮನದಲ್ಲಿರಿಸಿಕೊಂಡು,​​ ಅಶ್ವಿನ್​ಗೆ ಅವಕಾಶ ನೀಡೋ ಸಾಧ್ಯತೆಯಿದೆ.

ಇವರಿಬ್ಬರ ಹೊರತಾಗಿ ಉಪನಾಯಕ ಅಜಿಂಕ್ಯಾ ರಹಾನೆ ವಿಶ್ರಾಂತಿ ನೀಡೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಸತತ ವೈಫಲ್ಯಕ್ಕೆ ಸಿಲುಕಿರುವ ರಹಾನೆಗೆ ಕೆಲ ಪಂದ್ಯಗಳಿಂದ ರೆಸ್ಟ್​ ನೀಡಿ ಒತ್ತಡ ಕಡಿಮೆ ಮಾಡೋದು ಮ್ಯಾನೇಜ್​ಮೆಂಟ್​ ಪ್ಲಾನ್​ ಆಗಿದೆ. ರಹಾನೆ ಸ್ಥಾನದಲ್ಲಿ ಹನುಮವಿಹಾರಿಗೆ ಟಿಕೆಟ್​ ನೀಡೋ ಸಾಧ್ಯತೆಯಿದೆ.

ಇದನ್ನೂ ಓದಿ: 2028ರ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ವಿಜೃಂಭಿಸಲು ಐಸಿಸಿ ಪ್ಲಾನ್; ಕ್ರಿಕೆಟ್ ಪ್ರೇಮಿಗಳಲ್ಲಿ ಮತ್ತೆ ಚಿಗುರಿದ ಕನಸು

Source: newsfirstlive.com Source link