ಸಿಎಂ ಮೇಲೆ ನಂಬಿಕೆ ಇದ್ದು, ಪ್ರಬಲ ಖಾತೆ ನೀಡುವ ವಿಶ್ವಾಸವಿದೆ: ಎಂಟಿಬಿ

– ಯಾವುದೇ ಖಾತೆ ಕೊಟ್ರೂ ನಿಭಾಯಿಸುತ್ತೇನೆ

ಆನೇಕಲ್(ಬೆಂಗಳೂರು): ನನಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೇಲೆ ನಂಬಿಕೆ ಇದೆ. ಅವರು ನನಗೆ ಪ್ರಬಲ ಖಾತೆ ನೀಡುವ ಭರವಸೆ ನೀಡಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಖಾತೆ ಬದಲಾವಣೆ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ನನಗೆ ನಂಬಿಕೆ ಇದೆ. ಪ್ರಬಲ ಖಾತೆ ನೀಡುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಖ್ಯಮಂತ್ರಿಗಳು ಪ್ರಬಲ ಖಾತೆ ಕೊಡುವ ನಿರೀಕ್ಷೆ ಇದೆ ಎಂದು ಹೇಳಿದ ಸಚಿವರು ಇದೇ ವೇಳೆ ಆನಂದ್ ಸಿಂಗ್ ರಾಜಿನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್, ರೇಣುಕಾಚಾರ್ಯ ಲಾಬಿ

ಬಸವರಾಜ್ ಬೊಮ್ಮಾಯಿ ನೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಎದುರಾಗಿದೆ. ಸಚಿವ ಆನಂದ್ ಸಿಂಗ್ ಅವರು ಪ್ರಬಲ ಖಾತೆಗೆ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಇದೀಗ ಎಂಟಿಬಿ ಕೂಡ ಖಾತೆ ಬದಲಾವಣೆ ಮಾಡುವಂತೆ ಹಠಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

Source: publictv.in Source link