ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೆ ಒಂದು ವರ್ಷ; 7 ಆರೋಪಿಗಳಿಗಾಗಿ NIA ತಲಾಶ್

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೆ ಒಂದು ವರ್ಷ; 7 ಆರೋಪಿಗಳಿಗಾಗಿ NIA ತಲಾಶ್

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳಿಗಾಗಿ ಎನ್ಐಎ (ರಾಷ್ಟ್ರೀಯ ತನಿಖಾ ದಳ ) ತಲಾಶ್ ನಡೆಸಿದೆ. ಡಿಜೆಹಳ್ಳಿ ಕೆಜೆಹಳ್ಳಿ ಗಲಭೆ ಹಿಂದಿನ ಅಸಲಿ ಕ್ರಿಮಿನಲ್ಸ್ ಹಿಂದೆ ಬಿದ್ದಿರೋ ಎನ್ಐಎ, ಪ್ರಕರಣದಲ್ಲಿ ಬೆಂಗಳೂರು ಡಿಜೆಹಳ್ಳಿ, ಕೆಜೆಹಳ್ಳಿ ಹಾಗೂ ಸಿಸಿಬಿ ಪೊಲೀಸರು ಇವರೆಗೂ 413ಕ್ಕೂ ಹೆಚ್ಚು ಜನರನ್ನ ಬಂಧಿಸಿದ್ರು.

blank

ಪ್ರಾಥಮಿಕ ತನಿಖೆ ನಡೆಸಿ ಎನ್ಐಎ ಗಮನಕ್ಕೆ ತಂದಿದ್ದ ನಗರ ಸಿಸಿಬಿ ಪೊಲೀಸರು ಈ ಪೈಕಿ 9 ಜನರಿಗೆ ಉಗ್ರ ಸಂಘಟನೆಗಳ ಜೊತೆ ನಂಟಿರುವ ಶಂಕೆ ಇದೆ. ಈ ಮೇರೆಗೆ ಬೆಂಗಳೂರಿಗೆ ಆಗಮಿಸಿದ ಎನ್ಐಎ ಬಂಧಿತ 9 ಜನರನ್ನ ವಿಚಾರಣೆ ನಡೆಸಿತ್ತು. ವಿಚಾರಣೆ ಬೆನ್ನಲ್ಲೇ 7 ಜನರ ಲಿಸ್ಟ್ ಔಟ್ ರೆಡಿ ಮಾಡಿ ಬೆನ್ನತ್ತಿದೆ. ಎನ್ಐಎ ಲಿಸ್ಟ್ ನಲ್ಲಿರೋ 7 ಜನ ಕೂಡ ಬೆಂಗಳೂರಿನ ನಿವಾಸಿಗಳು ಎನ್ನಲಾಗ್ತಿದೆ.

ಇದನ್ನೂ ಓದಿ:  ಬೆಂಗಳೂರು ಗಲಾಟೆಯಲ್ಲಿ ಸುಟ್ಟು ಕರಕಲಾದ ವಾಹನಗಳು ಶಿಫ್ಟ್

ಆರೋಪಿಗಳ ನಿವಾಸ, ಸ್ನೇಹಿತರು, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದ್ದ ಎನ್ಐಎ, ಡಿಜಿಟಲ್ ತಂತ್ರಜ್ಞಾನ ಬಳಸಿ ಆರೋಪಿಗಳು ಕುಟುಂಬಸ್ಥರ ಜೊತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಕಳೆದೊಂದು ವರ್ಷದಲ್ಲಿ ನಾಲ್ಕು ಬಾರಿ ದಾಳಿ ಮಾಡಿದ್ದರೂ ಎನ್ಐಎ ಕೈಗೆ ಸಿಗದ 7 ಮಂದಿ ಆರೋಪಿಗಳಿಗಾಗಿ ಸದ್ಯ ದೇಶಾದ್ಯಂತ ತೀವ್ರ ತಲಾಶ್​ ನಡೆಸಲಾಗ್ತಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ
ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಒಂದಕ್ಕೆ ಶುರುವಾಗಿದ್ದ ಗಲಾಟೆ ನಗರದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿತ್ತು. ನವೀನ್ ವಿರುದ್ಧ ದೂರು ತೆಗೆದುಕೊಂಡಿಲ್ಲ ಎಂದು ರೊಚ್ಚಿಗೆದ್ದಿದ್ದ ಉದ್ರಿಕ್ತರ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿತ್ತು. ಶಾಸಕ ಅಖಂಡ ಶ್ರೀನಿವಾಸ್ ಮನೆ ಸೇರಿದಂತೆ ನೂರಾರು ವಾಹನಗಳು, ಎರಡು ಪೊಲೀಸ್ ಸ್ಟೇಷನ್​ಗಳಿಗೆ ಬೆಂಕಿ ಹಚ್ಚಿದ್ದರು. ಘಟನೆ ವೇಳೆ ಪೊಲೀಸ್ ಫೈರಿಂಗ್​ಗೆ ಒಬ್ಬ ಬಲಿಯಾಗಿದ್ದ.

blank

ಪ್ರಕರಣ ಸಂಬಂಧ 413 ಕ್ಕೂ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಶುರು ಮಾಡಿದ್ದರು. ಇನ್ನು ಗಲಭೆಗೆ ಕಾರಣವಾದ ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ಮಾಜಿ ಮೇಯರ್ ಸಂಪತ್ ರಾಜ್ ರನ್ನೂ ಪೊಲೀಸರು ಬಂಧಿಸಿದ್ದರು.

ಸದ್ಯ ಸುಟ್ಟು ಕರಕಲಾಗಿದ್ದ ಅಖಂಡ ಶ್ರೀನಿವಾಸ ಅವರ ಮನೆ ಕೆಡವಲಾಗಿದ್ದು, ಡಿಜೆ ಹಳ್ಳಿ ಪೊಲೀಸ್ ಠಾಣೆ ಮಾತ್ರ ಕಪ್ಪು ಮಸಿ, ಹಾಗೂ ಸುಟ್ಟು ಕರಕಲಾದ ಸ್ಥಿತಿಯಲ್ಲೇ ಇದೆ. ಘಟನೆಯಲ್ಲಿ ಪೊಲೀಸ್ ಠಾಣೆಯ 40 ದ್ವಿಚಕ್ರ ವಾಹನಗಳು ಸುಟ್ಟು ಹೋಗಿವೆ. ಆದರೆ ಸದ್ಯ ಕೇವಲ 20 ದ್ವಿಚಕ್ರ ವಾಹನಗಳನ್ನ ಮಾತ್ರ ಠಾಣೆಗೆ ನೀಡಿರೋ ಸರ್ಕಾರ, ಘಟನೆ ನಡೆದು ವರ್ಷ ಕಳೆದರೂ ಡಿಜೆ ಹಳ್ಳಿ ಪೊಲೀಸ್ ಠಾಣೆಗಿಲ್ಲ ನವೀಕರಣ ಭಾಗ್ಯ ಸಿಕ್ಕಿಲ್ಲ.

ಇದನ್ನೂ ಓದಿ : ಕೆ.ಜಿ ಹಳ್ಳಿ ಪ್ರಕರಣದ ತನಿಖೆಗಾಗಿ 7 ವಿಶೇಷ ತಂಡಗಳ ರಚನೆ

Source: newsfirstlive.com Source link