ಬ್ಯಾಂಕ್​​ ಗ್ರಾಹಕರಿಗೆ ಗುಡ್​​ನ್ಯೂಸ್​​; ಅ.01 ರಿಂದ ಎಟಿಎಂನಲ್ಲಿ ಹಣವಿಲ್ಲದಿದ್ದರೇ ಬ್ಯಾಂಕ್​​ಗೆ ದಂಡ

ಬ್ಯಾಂಕ್​​ ಗ್ರಾಹಕರಿಗೆ ಗುಡ್​​ನ್ಯೂಸ್​​; ಅ.01 ರಿಂದ ಎಟಿಎಂನಲ್ಲಿ ಹಣವಿಲ್ಲದಿದ್ದರೇ ಬ್ಯಾಂಕ್​​ಗೆ ದಂಡ

ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ ದೇಶದ ಬ್ಯಾಂಕ್​ ಗ್ರಾಹಕರಿಗೆ ಗೂಡ್​ ನ್ಯೂಸ್​ ನೀಡಿದ್ದು, ಬ್ಯಾಂಕ್​ ಹಾಗೂ ವೈಟ್​​​ ಲೆಬುಲ್​ ಎಟಿಎಂ ಅಪರೇಟರ್​​ಗಳಿಗೆ ದಂಡ ವಿಧಿಸುವ ಅಂಶವನ್ನು ಮುಂದಿಟ್ಟಿದೆ. ಇದರಿಂದ ಬ್ಯಾಂಕ್​ ಗ್ರಾಹಕರಿಗೆ ಅನುಕೂಲ ಆಗಲಿದೆ.

ಅಕ್ಟೋಬರ್​ 01 ರಿಂದ ಹೊಸ ರೂಲ್ಸ್​ ಜಾರಿ ಆಗಲಿದ್ದು, ಇದರಂತೆ ಎಂಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್, ವೈಟ್​ ಲೆಬುಲ್​ ಎಟಿಎಂ ಅಪರೇಟರ್ಸ್​​ಗೆ ದಂಡ ತೆರಬೇಕಿದೆ. ಹಲವು ಸಂದರ್ಭಗಳಲ್ಲಿ ಎಟಿಎಂಗಳಿಗೆ ತೆರಳಿದ ಸಂದರ್ಭದಲ್ಲಿ ಎಟಿಎಂ ಕ್ಯಾಷ್​​ ಇಲ್ಲದಿರುವುದು ತಿಳಿಯದೇ ಗ್ರಾಹಕರು ಕಾರ್ಡ್​​ ಹಾಕಿ ಪಿನ್​ ಎಂಟರ್​​ ಮಾಡಿದ ಬಳಿಕ ಹಣವಿಲ್ಲದಿರುವುದು ತಿಳಿಯುತ್ತದೆ. ಇಂತಹ ಸಮಯದಲ್ಲಿ ಗ್ರಾಹಕರು ಸಾಕಷ್ಟು ಭಾರೀ ಸಮಸ್ಯೆ ಎದುರಿಸುತ್ತಾರೆ. ಪರಿಣಾಮ ಎಟಿಎಂನಲ್ಲಿ ಯಾವಾಗಲೂ ನಗದು ಲಭ್ಯವಿರುವಂತೆ ಮಾಡಲು ಆರ್​ಬಿಐ ಹೊಸ ರೂಲ್ಸ್​ ಜಾರಿ ಮಾಡಲು ಮುಂದಾಗಿದೆ.

ಎಟಿಎಂನಲ್ಲಿ 10 ಗಂಟೆಗಿಂತ ಹೆಚ್ಚು ಸಮಯ ನಗದು ಲಭ್ಯವಿಲ್ಲದಿದ್ದರೇ ಬ್ಯಾಂಕ್​​ಗಳು ಹಾಗೂ ವೈಟ್​ ಲೆಬುಲ್​ ಅಪರೇಟರ್ಸ್​​ಗಳಿಗೆ ಒಂದು ಎಟಿಎಂಗೆ ಸುಮಾರು 10 ಸಾವಿರ ರೂಪಾಯಿ ದಂಡ ವಿಧಿಸುವ ಅವಕಾಶವಿದೆ.

Source: newsfirstlive.com Source link