ಬಿಎಸ್‍ವೈ ರಾಜೀನಾಮೆ ನೀಡುವ ಮೊದಲೇ ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್

ಬೆಂಗಳೂರು: ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮುನ್ನವೇ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಾಜೀನಾಮೆ ಕೊಡಲು ಮುಂದಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಜುಲೈ 26ರಂದು ಯಡಿಯೂರಪ್ಪ ರಾಜೀನಾಮೆ ಕೊಡುವ ಮುನ್ನವೇ ಆನಂದ್ ಸಿಂಗ್ ಬಿಎಸ್‍ವೈ ನಿವಾಸಕ್ಕೆ ತೆರಳಿ ರಾಜೀನಾಮೆ ಪತ್ರ ತೆಗೆದುಕೊಂಡು ಹೋಗಿದ್ದರು. ಇದನ್ನೂ ಓದಿ: ರಾಜೀನಾಮೆಗೆ ಮುಂದಾಗಿರೋ ಆನಂದ್ ಸಿಂಗ್ ಸಿಎಂ ಕರೆಗೂ ಡೋಂಟ್ ಕೇರ್!

ಖಾತೆ ಸರಿ ಇಲ್ಲ, ಮುಂದೆ ಸರಿ ಹೋಗುತ್ತೋ ಇಲ್ಲವೋ ಎಂದು ಹೇಳಿ ರಾಜೀನಾಮೆ ಪತ್ರವನ್ನು ತೆಗೆದುಕೊಂಡು ಹೋಗಿದ್ದರು. ಆಗ ಯಡಿಯೂರಪ್ಪ ಗದರಿ ಮುಂದೆ ಸರಿ ಹೋಗುತ್ತೆ ಹೋಗು ಎಂದು ಕಳುಹಿಸಿದ್ದರು. ಆಗ ರಾಜೀನಾಮೆ ಪತ್ರ ವಾಪಸ್ ತೆಗೆದುಕೊಂಡು ಹೋಗಿದ್ದ ಆನಂದ್ ಸಿಂಗ್ ಈಗ ಮತ್ತೆ ಯಡಿಯೂರಪ್ಪ ಅಂಗಳಕ್ಕೆ ರಾಜೀನಾಮೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಈಗ ಆನಂದ್ ಸಿಂಗ್ ಒತ್ತಡಕ್ಕೆ ಮಣಿದು ಬಸವರಾಜ ಬೊಮ್ಮಾಯಿ ಹೇಳಿ ಖಾತೆ ಬದಲಾಯಿಸ್ತಾರಾ? ಅಥವಾ ಆನಂದ್ ಸಿಂಗ್ ಅವರನ್ನೇ ಯಡಿಯೂರಪ್ಪ ಮನ ಒಲಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

Source: publictv.in Source link