2019 ರ ಬಳಿಕ ಕೊಹ್ಲಿ ಔಟ್​ ಆಫ್ ಫಾರ್ಮ್​​; 15 ಟೆಸ್ಟ್​ ಇನ್ನಿಂಗ್ಸ್​​ನಲ್ಲಿ ​​ಕೇವಲ​ ಸರಾಸರಿ 23 ರನ್​

2019 ರ ಬಳಿಕ ಕೊಹ್ಲಿ ಔಟ್​ ಆಫ್ ಫಾರ್ಮ್​​; 15 ಟೆಸ್ಟ್​ ಇನ್ನಿಂಗ್ಸ್​​ನಲ್ಲಿ ​​ಕೇವಲ​ ಸರಾಸರಿ 23 ರನ್​

ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ನಿಜಕ್ಕೂ ಔಟ್​​ ಆಫ್​ ಫಾರ್ಮ್​ ಆಗಿದ್ದಾರಾ? ಹೀಗೊಂದು ಪ್ರಶ್ನೆ ಕ್ರಿಕೆಟ್​​ ವಲಯದಲ್ಲಿ ಸದ್ದು ಮಾಡ್ತಿದೆ. ಪದಾರ್ಪಣೆ ಮಾಡಿದ ದಶಕದಲ್ಲೇ ಲೆಜೆಂಡ್​​ ಅನಿಸಿಕೊಂಡ ಕೊಹ್ಲಿ, ಕಳೆದೆರಡು ವರ್ಷಗಳಿಂದ ಹಿನ್ನಡೆ ಅನುಭವಿಸ್ತಾ ಇರೋದು ಯಾಕೆ ಅನ್ನೋ ಪ್ರಶ್ನೆ ಶುರುವಾಗಿದೆ.

blank

ಇಂಡೋ-ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯ, ಹಲವು ಕಾರಣದಿಂದ ಕುತೂಹಲ ಮೂಡಿಸಿತ್ತು. ವಿರಾಟ್​ ಕೊಹ್ಲಿ ಹಾಗೂ ಜೇಮ್ಸ್​​ ಆ್ಯಂಡರ್ಸನ್​ ನಡುವಿನ ಬ್ಯಾಟಲ್​ ಅಂತೂ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. 2014ರಲ್ಲಿ ಆ್ಯಂಡರ್ಸನ್​ ಎದುರು ಮಂಡಿಯೂರಿದ್ದ ಕೊಹ್ಲಿ 2018ರಲ್ಲಿ ಪುಟಿದೆದ್ದಿದ್ರು. ಆದ್ರೆ ಈ ಬಾರಿಯ ಪ್ರವಾಸದ ಮೊದಲ ಪಂದ್ಯದಲ್ಲೇ ಕೊಹ್ಲಿ, ಆ್ಯಂಡರ್ಸನ್​ ದಾಳಿಗೆ ನಿರುತ್ತರರಾದ್ರು.

ನಾಟಿಂಗ್​ಹ್ಯಾಮ್​ ಟೆಸ್ಟ್ ಪಂದ್ಯದ ಗೋಲ್ಡನ್​ ಡಕೌಟ್​ನೊಂದಿಗೆ ಅಭಿಮಾನಿಗಳಿಟ್ಟಿದ್ದ ಶತಕದ ನಿರೀಕ್ಷೆಯೂ ಹುಸಿಯಾಯ್ತು. ಇದೆಲ್ಲದರ ಜೊತೆಗೆ ಕೊಹ್ಲಿ ಕಂಪ್ಲೀಟ್​ ಔಟ್​ ಆಫ್​​ ಫಾರ್ಮ್​ ಆದ್ರಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ವಿಶ್ವ ಕ್ರಿಕೆಟ್​ನ ಫ್ಯಾಬ್​ ಫೋರ್​​ ಪಟ್ಟಿಯಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳೋ ಕೊಹ್ಲಿ 2019ರ ನವೆಂಬರ್​ ಬಳಿಕ ಶತಕವನ್ನೇ ಸಿಡಿಸಿಲ್ಲ. ಇಷ್ಟೇ ಅಲ್ಲ.. ಅರ್ಧಶತಕದ ಗಡಿ ದಾಟಿರೋದು ಕೂಡ ಕೇವಲ ಮೂರೇ ಬಾರಿ..!

blank

2014ರ ಬಳಿಕ ಉತ್ತುಂಗದಲ್ಲಿದ್ದ ಕೊಹ್ಲಿ ಟೆಸ್ಟ್​ ಕರಿಯರ್​​ 2019ರ ಬಳಿಕ ಇಳಿಮುಖವಾಗೇ ಸಾಗ್ತಿದೆ. ಇನ್​ಫ್ಯಾಕ್ಟ್​​ 2019 ನವೆಂಬರ್​​ 22ರಂದು ಕೊಹ್ಲಿ ಕೊನೆಯ ಶತಕ ಸಿಡಿಸಿದ ಬಳಿಕ ಈವರೆಗೆ 15 ಇನ್ನಿಂಗ್ಸ್​ಗಳನ್ನಾಡಿದ್ದಾರೆ. ಈ ಇನ್ನಿಂಗ್ಸ್​ಗಳಲ್ಲಿ ಕೇವಲ 23ರ ಸರಾಸರಿಯಲ್ಲಿ ರನ್​ ಕಲೆ ಹಾಕಿರೋ ಕೊಹ್ಲಿ 3 ಬಾರಿ ಡಕೌಟ್​ ಆಗಿದ್ದಾರೆ. 817 ಎಸೆತಗಳನ್ನ ಎದುರಿಸಿದ್ರೂ ಒಂದೇ ಒಂದು ಸಿಕ್ಸರ್​ ಕೂಡ ಕೊಹ್ಲಿ ಬ್ಯಾಟ್​ನಿಂದ ಬಂದಿಲ್ಲ.

ಕೊನೆಯ ಶತಕದ ಬಳಿಕ ಟೆಸ್ಟ್​ನಲ್ಲಿ ಕೊಹ್ಲಿ

  • ಇನ್ನಿಂಗ್ಸ್​​-15
  • ರನ್​-345
  • ಸರಾಸರಿ-23.00
  • 100/50, 0/3
  • blank

ಟೆಸ್ಟ್​​ ಮಾದರಿಯಲ್ಲಿ ಮಾತ್ರವಲ್ಲ.. ಏಕದಿನ, ಟಿ20ಯಲ್ಲೂ ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಇನ್​​ ಕನ್ಸಿಸ್ಟೆನ್ಸಿಯ ಸಮಸ್ಯೆಯೂ ವಿರಾಟ್​ ಬೆನ್ನು ಬಿದ್ದಿದೆ. ಕ್ರಿಕೆಟ್​​ನಲ್ಲಿ ಸಕ್ರಿಯವಾಗಿರುವಾಗಲೇ ಲೆಜೆಂಡ್​ ಎಂದು ಕರೆಸಿಕೊಂಡ ಆಟಗಾರ ದಿಢೀರ್​​ ಕುಸಿತ ಕಾಣ್ತಿರೋದು ಎಲ್ಲರಲ್ಲೂ ಆಶ್ಚರ್ಯಕ್ಕೆ ಕಾರಣವಾಗಿದೆ. ಜೊತೆಗೆ ಭರವಸೆಯ ಆಟಗಾರ ಎಡವುತ್ತಿರೋದೆಲ್ಲಿ ಎಂಬುದಕ್ಕೆ ಹುಡುಕಾಟವೂ ನಡೀತಿದೆ.

Source: newsfirstlive.com Source link