ವೈದ್ಯೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ಗಾಯಕ ಹೇಮಂತ್

ವೈದ್ಯೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ಗಾಯಕ ಹೇಮಂತ್

ಬೆಂಗಳೂರು: ಸ್ಯಾಂಡಲ್​​ವುಡ್​ ಖ್ಯಾತ ಗಾಯಕ ಹೇಮಂತ್​​, ವೈದ್ಯೆ ಕೃತಿಕ ಜೊತೆ ಸಪ್ತಪದಿ ತುಳಿದಿದ್ದಾರೆ. ಇಂದು ಬೆಂಗಳೂರಿನಲ್ಲಿ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹೇಮಂತ್, ಕೃತಿಕಾ ಮದುವೆ ಸಮಾರಂಭ ನೆರವೇರಿದೆ.

ಗಾಯಕ ಹೇಮಂತ್ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ್ದು, ಸ್ಟಾರ್ ನಟರ ಚಿತ್ರಗಳಲ್ಲಿ ಹಾಡಿ ಖ್ಯಾತಿ ಗಳಿಸಿದ್ದಾರೆ. ಹೇಮಂತ್ ಅವರಿಗೆ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಹಾಡು ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿತ್ತು. ಉಪೇಂದ್ರ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಶ್ರೀನಗರ ಕಿಟ್ಟಿ ಸೇರಿದಂತೆ ಸಾಕಷ್ಟು ನಟರ ಚಿತ್ರಗಳಲ್ಲಿ ಹಾಡಿದ್ದಾರೆ. ಅಲ್ಲದೇ ಹಂಸಲೇಖ, ವಿ.ಮನೋಹರ್, ಗುರುಕಿರಣ್, ಮನೋಮೂರ್ತಿ, ಅರ್ಜುನ್ ಜನ್ಯ, ಹರಿಕೃಷ್ಣ , ಸಾಧು ಕೋಕಿಲ, ರಿಕ್ಕಿ ಕೇಜ್, ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತಕ್ಕೆ ಹೇಮಂತ್ ದನಿ ನೀಡಿದ್ದಾರೆ. ಇನ್ನು ಹೇಮಂತ್ ವಿವಾಹವಾಗಿರುವ ಕೃತಿಕ ಅವರು ನಗರದ ಸೆಂಟ್ ಜಾನ್ ಅಸ್ಪತ್ರೆಯಲ್ಲಿ Nephrologist ಆಗಿ ಕೆಲಸ ಮಾಡ್ತಿದ್ದಾರೆ.

blank

Source: newsfirstlive.com Source link