ಸಿಎಂ ರನ್ನು ಭೇಟಿ ಮಾಡಿ ಅನಿಲ್​ ಕುಂಬ್ಳೆ ನೀಡಿದ ಸ್ಮರಣಿಕೆ ವಿಶೇಷತೆ ಏನು ಗೊತ್ತಾ?

ಸಿಎಂ ರನ್ನು ಭೇಟಿ ಮಾಡಿ ಅನಿಲ್​ ಕುಂಬ್ಳೆ ನೀಡಿದ ಸ್ಮರಣಿಕೆ ವಿಶೇಷತೆ ಏನು ಗೊತ್ತಾ?

ಬೆಂಗಳೂರು: ಭಾರತದ ಸ್ಪಿನ್​ ದಂತಕಥೆ ಅನಿಲ್​ ಕುಂಬ್ಳೆ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಇಂದು ನಗರದಲ್ಲಿ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಅನಿಲ್​ ಕುಂಬ್ಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ, ಈ ವೇಳೆ 1999 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಪಡೆದು ಜೀವಮಾನ ಸಾಧನೆಗೈದ ಅಪೂರ್ವ ಕ್ಷಣಗಳ ಸ್ಮರಣಿಕೆಯೊಂದನ್ನು ಕುಂಬ್ಳೆ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

ಇನ್ನು ಈ ಸಂದರ್ಭವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಸಿಎಂ ಬೊಮ್ಮಾಯಿ ‘ಬೆಂಗಳೂರಿನ ನಮ್ಮ ನಿವಾಸದಲ್ಲಿ ಭಾರತದ ಕ್ರಿಕೆಟ್‌ ದಿಗ್ಗಜ ನಮ್ಮ ರಾಜ್ಯದ ಹಿರಿಮೆ ಶ್ರೀ ಅನಿಲ್ ಕುಂಬ್ಳೆ ಅವರು ಭೇಟಿಯಾಗಿ ಅಭಿನಂದಿಸಿ ಶುಭಕೋರಿದರು, ಈ ಸಂದರ್ಭದಲ್ಲಿ ಅವರು ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಪಡೆದು ಅಧ್ಬುತ ಸಾಧನೆಗೈದ ಕ್ಷಣಗಳ ನೆನಪಿನ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು’ ಎಂದಿದ್ದಾರೆ.

Source: newsfirstlive.com Source link