‘ಜೊಲ್ಲೆ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಈಶ್ವರಪ್ಪ​ ನಾಚಿಕೆಗೇಡಿನ ಹೇಳಿಕೆ

‘ಜೊಲ್ಲೆ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ’ ಈಶ್ವರಪ್ಪ​ ನಾಚಿಕೆಗೇಡಿನ ಹೇಳಿಕೆ

ಬೆಂಗಳೂರು: ಸಚಿವೆ ಶಶಿಕಲಾ ಜೊಲ್ಲೆ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ. ಅವರು ನಮ್ಮ ಸಿಸ್ಟರ್​ ಇದ್ದ ಹಾಗೆ. ಭ್ರಷ್ಟಾಚಾರ ಸಂಬಂಧ ಒಂದೇ ಒಂದು ಕಪ್ಪುಚುಕ್ಕಿ ಕೂಡ ಅವರ ಮೇಲೆ ಇಲ್ಲ ಅಂತಾ ಸಚಿವ ಕೆಎಸ್​ ಈಶ್ವರಪ್ಪ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ.

ಸಚಿವ ಶಶಿಕಲಾ ಜೊಲ್ಲೆ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಯಾವುದೇ ವ್ಯಕ್ತಿ ಕೊಲೆ ಮಾಡಿ ಬಂದಿದ್ದರೂ ಕೂಡ ಆತನ ವಿರುದ್ಧ ತನಿಖೆ ಮಾಡಿ, ತೀರ್ಪು ಬಂದ ಮೇಲೆಯೇ ಶಿಕ್ಷೆ ಆಗೋದು. ಯಾರೋ ಒಬ್ಬರು ಬಂದರು, ಶಶಿಕಲಾ ಜೊಲ್ಲೆ ಜೊತೆ ಮಾತನಾಡಿದರು ಅಂದ ಮಾತ್ರಕ್ಕೆ ಅವರು ಭಷ್ಟ್ರಾಚಾರ ಆರೋಪ ಹೊತ್ತಿದ್ದಾರೆ, ಅವರ ರಾಜೀನಾಮೆ ಕೊಡಿಸಿ ಅನ್ನೋದು ತಪ್ಪು.

blank

ಅವರು ನನ್ನ ಸಿಸ್ಟರ್
ಅದರಲ್ಲಿ ಏನಾದರೂ ಒಂದು ಪರ್ಸೆಂಟ್​ನಷ್ಟಾದರೂ ಸತ್ಯ ಇರಬೇಕಲ್ವವಾ? ಜೊಲ್ಲೆ ಅವರ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇದೆ. ಅವರು ನಮ್ಮ ಸಿಸ್ಟರ್​ ಇದ್ದ ಹಾಗೆ. ಭ್ರಷ್ಟಾಚಾರ ಸಂಬಂಧ ಒಂದೇ ಒಂದು ಕಪ್ಪುಚುಕ್ಕಿ ಕೂಡ ಅವರ ಮೇಲೆ ಇಲ್ಲ. ಯಾಕೆ ಸುಮ್ನೆ ತನಿಖೆ ಮಾಡಬೇಕು? ಯಾರೋ ಹೇಳಿದರು ಅಂದ ಮಾತ್ರಕ್ಕೆ ಯಾಕೆ ತನಿಖೆ ಮಾಡಿಸುತ್ತ ಕೂರಬೇಕು? 25 ಲಕ್ಷ ಹಣವನ್ನ ತೋರಿಸಿದ ತಕ್ಷಣ ಹಣವನ್ನ ತೆಗೆದುಕೊಂಡು ಬಿಟ್ಟಿದ್ದಾರೆ ಅಂತಾ ಅರ್ಥನಾ? ಅದರ ಬಗ್ಗೆ ಯಾವ ತನಿಖೆಯೂ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

Source: newsfirstlive.com Source link