ಲಾರ್ಡ್ಸ್​ ಟೆಸ್ಟ್​ಗೆ ಮಯಾಂಕ್, ಇಶಾಂತ್ ಫಿಟ್- ಕ್ಯಾಪ್ಟನ್​ ಕೊಹ್ಲಿಗೆ ಆಯ್ಕೆ ತಲೆನೋವು..!

ಲಾರ್ಡ್ಸ್​ ಟೆಸ್ಟ್​ಗೆ ಮಯಾಂಕ್, ಇಶಾಂತ್ ಫಿಟ್- ಕ್ಯಾಪ್ಟನ್​ ಕೊಹ್ಲಿಗೆ ಆಯ್ಕೆ ತಲೆನೋವು..!

ಮೊದಲ ಟೆಸ್ಟ್​​ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸ್ತಿದ್ದ ಟೀಮ್​ ಇಂಡಿಯಾ ಓಪನರ್​ ಮಯಾಂಕ್​ ಅಗರ್ವಾಲ್, ಗಾಯಗೊಂಡಿದ್ರು. ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಬಾಲ್, ತಲೆಗೆ ಬಡಿದು ನಾಟಿಂಗ್​ಹ್ಯಾಮ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ರು. ಇದೀಗ ಲಾರ್ಡ್ಸ್​ ಟೆಸ್ಟ್ ಪಂದ್ಯಕ್ಕೂ ಮುನ್ನ ಮಯಾಂಕ್​​, ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕನ್​ಕಷನ್​​ನಿಂದ ಹೊರ ಬಂದಿರುವ ಮಯಾಂಕ್ ಅಗರ್ವಾಲ್, ಮ್ಯಾಚ್ ಫಿಟ್​ ಆಗಿರುವ ಕಾರಣ ನೆಟ್ಸ್​​​ನಲ್ಲಿ ಬೆವರು ಸುರಿಸಿದ್ದಾರೆ.

ಹಾಗೆಯೇ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಮತ್ತೊಬ್ಬ ಆಟಗಾರ ಇಶಾಂತ್ ಶರ್ಮಾ ಕೂಡ ನೆಟ್ಸ್​​​​ನಲ್ಲಿ​​​​ ಸಮರಾಭ್ಯಾಸ ನಡೆಸಿದ್ರು.  ಸದ್ಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಇಬ್ಬರು ಅಭ್ಯಾಸ ಆರಂಭಿಸಿದ ಹಿನ್ನೆಲೆ ದ್ವಿತೀಯ ಟೆಸ್ಟ್​​​ಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ತಂಡದಲ್ಲಿ ಎರಡು ಬದಲಾವಣೆ ತರುವ ಉದ್ದೇಶವನ್ನ ಟೀಮ್​ ಮ್ಯಾನೇಜ್​ಮೆಂಟ್​ ಹೊಂದಿದ್ದು, ಈ ಇಬ್ಬರನ್ನು ಆಡಿಸಬಹುದು ಎನ್ನಲಾಗ್ತಿದೆ. ಆದರೆ ಇವರನ್ನು ತಂಡಕ್ಕೆ ಆಯ್ಕೆ ಮಾಡಿದರೆ, ಯಾರನ್ನು ಕೈಬಿಡುತ್ತಾರೆ ಎಂಬ ಪ್ರಶ್ನೆ ಎದ್ದಿದೆ.

 

Source: newsfirstlive.com Source link