ಕ್ರಿಕೆಟ್ ಕಾಶಿಯಲ್ಲಿ ಟೀಮ್​ ಇಂಡಿಯಾ ಆಟಗಾರರ ಭರ್ಜರಿ ಸಮರಾಭ್ಯಾಸ

ಕ್ರಿಕೆಟ್ ಕಾಶಿಯಲ್ಲಿ ಟೀಮ್​ ಇಂಡಿಯಾ ಆಟಗಾರರ ಭರ್ಜರಿ ಸಮರಾಭ್ಯಾಸ

ಭಾರತ – ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದೆ,. ಈ ಪಂದ್ಯ ಕ್ರಿಕೆಟ್​ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡಿದ್ದು, ಎರಡನೇ ಟೆಸ್ಟ್​​ಗೆ ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸ್ತಿದೆ. ಲಾರ್ಡ್ಸ್​​​​ನಲ್ಲಿ ಟೀಮ್​ ಇಂಡಿಯಾ ಆಟಗಾರರು ನೆಟ್ಸ್​​​ನಲ್ಲಿ ಬೆವರು ಹರಿಸ್ತಿದ್ದಾರೆ. ಬ್ಯಾಟ್ಸ್​​ಮನ್​ಗಳಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಚೇತೇಶ್ವರ್​ ಪೂಜಾರ, ಕೆ.ಎಲ್​.ರಾಹುಲ್​​, ವೇಗಿಗಳಾದ ಜಸ್​ಪ್ರಿತ್​ ಬುಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್​ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ.

ಇನ್ನು ಮೊದಲ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್​​ ಪ್ರದರ್ಶಿಸಿದ ಕಾರಣ, ಫೀಲ್ಡಿಂಗ್​ ಕೋಚ್​ ಆರ್​ ಶ್ರೀಧರ್​ ಆಟಗಾರರಿಗೆ ಫುಲ್​ ಡ್ರಿಲ್​ ಮಾಡಿಸಿದ್ದಾರೆ. ಸ್ಲಿಪ್​​ನಲ್ಲಿ ಕೆಲ ಕ್ಯಾಚ್​​ಗಳನ್ನು ಕೈ ಚೆಲ್ಲಿದ್ರು. ಇದರಿಂದ ಇಂಗ್ಲೆಂಡ್​ 208ರನ್​ಗಳ ಗುರಿ ನೀಡಲು ನೆರವಾಗಿತ್ತು. ಅದಕ್ಕಾಗಿ ಮುಂದೆ ಈ ತಪ್ಪು ಮರುಕಳಿಸಬಾರದೆಂದು, ಫೀಲ್ಡಿಂಗ್ ಕೋಚ್ ಆಟಗಾರರಿಗೆ​ ಕ್ಯಾಚ್​ ಪ್ರಾಕ್ಟೀಸ್​ ಮಾಡಿಸಿದ್ದಾರೆ. ಹಾಗೆಯೇ ವಿಕೆಟ್​​ ಕೀಪರ್​ ರಿಷಭ್​ ಪಂತ್​ಗೂ ಸಖತ್​ ವರ್ಕೌಟ್​ ಮಾಡಿಸಿದ್ದಾರೆ. ಎದುರಾಳಿ ಬ್ಯಾಟ್ಸ್​​ಮನ್​​ ಚಮಕ್​​ ಕೊಡುವಾಗ, ಕೀಪರ್​ ಯಾವ ರೀತಿ ಅಲರ್ಟ್ ಆಗಿರಬೇಕು ಅನ್ನೋದನ್ನ ಪಂತ್​ಗೆ​ ಪಾಠ ಮಾಡಿದ್ದಾರೆ.

ಸದ್ಯ ಟೀಮ್​ ಇಂಡಿಯಾ, ಇಂಗ್ಲೆಂಡ್​ ತಂಡವನ್ನ ಮಣಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆದುಕೊಳ್ಳುವ ತವಕದಲ್ಲಿದೆ.

Source: newsfirstlive.com Source link