‘ಅಗ್ರಸೇನಾ’ನಾಗಿ ಬರ್ತಿದ್ದಾರೆ ಹಿರಿಯ ನಟ ರಾಮಕೃಷ್ಣ.. 200ನೇ ಚಿತ್ರಕ್ಕೆ ಗ್ರಾಂಡ್ ಕತೆ..!

‘ಅಗ್ರಸೇನಾ’ನಾಗಿ ಬರ್ತಿದ್ದಾರೆ ಹಿರಿಯ ನಟ ರಾಮಕೃಷ್ಣ.. 200ನೇ ಚಿತ್ರಕ್ಕೆ ಗ್ರಾಂಡ್ ಕತೆ..!

ಹಿರಿಯ ನಟ ರಾಮಕೃಷ್ಣ ಯಾರಿಗೆ ತಾನೆ ನೆನಪಿಲ್ಲ ಹೇಳಿ.. ತಮ್ಮ ಅದ್ಬುತ ಅಭಿನಯದ ಮೂಲಕವೇ ಕನ್ನಡಿಗರ ಹೃದಯ ಗೆದ್ದವರು ರಾಮಕೃಷ್ಣ..ಬ್ಲಾಕ್​ ಌಂಡ್ ವೈಟ್, ಈಸ್ಟ್ ಮನ್ ಕಲರ್, ಇಂದಿನ ಡಿಜಿಟಲ್ ಚಿತ್ರರಂಗಕ್ಕೂ ಹೊಂದಿಕೊಂಡಿರುವ ರಾಮಕೃಷ್ಣ ಅವರು, ತಮ್ಮ ಸಿನಿಜರ್ನಿಯಲ್ಲಿ ಒಂದು ಒಂದು ಮೈಲಿಗಲ್ಲಿಗೆ ಅವರ ಹೆಸರನ್ನು ಸೇರಿಸಿ ಕೊಂಡಿದ್ದಾರೆ..

ಅಮೃತ ಘಳಿಗೆ, ಬೆಂಕಿಯಲ್ಲಿ ಅರಳಿದ ಹೂ, ಯುಗಪುರುಷ, ಪಡುವಾರಳ್ಳಿ ಪಾಂಡವರು ಚಿತ್ರಗಳಲ್ಲಿ ರಾಮಕೃಷ್ಣ ಅವರ ನಟನೆ ಇಂದಿಗೂ ಕನ್ನಡಿಗೆ ಕಣ್ ಮುಂದೆ ಇದೆ..ಯಾವುದೇ ಪಾತ್ರ ಕೊಟ್ರು ಲೀಲಾಜಾಲವಾಗಿ ನಟಿಸುವ ರಾಮಕೃಷ್ಣ ಪುಟ್ಟಣ್ಣ ಕಣಗಾಲ್ ಅವರ ಗರಡಿಯ ಅಪ್ಪಟ ದೇಸಿ ಪ್ರತಿಭೆ.. 1977ರಲ್ಲಿ ಬಬ್ರುವಾಹನ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ರಾಮಕೃಷ್ಣ ದ್ವಿಶತಕದ ಹೊಸ್ತಿಲಲ್ಲಿ ಆಗ್ರಸೇನನಾಗಿ ಕನ್ನಡಿಗರ ರಂಜಿಸೋಕೆ ಸಿದ್ದರಾಗಿದ್ದಾರೆ…

blank

ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ ಎಂದು ಸಂಭ್ರಮದಿ ಹಾಡಿ, ನಗುವಿನ ಜೊತೆ ಕಣ್ಣೀರು ತರಿಸುವಂತೆ ಅದ್ಬುತವಾಗಿ ನಟಿಸಿದ್ರು ರಾಮಕೃಷ್ಣ.. ಚಿತ್ರದಿಂದ ಚಿತ್ರಕ್ಕೆ ವಿಶೇಷವಾದ ಪಾತ್ರಗಳಲ್ಲೇ ಚಿತ್ರಪ್ರೇಮಿಗಳ ರಂಜಿಸುತ್ತ ರಾಮಕೃಷ್ಣ ಅವರು ಚಿತ್ರರಂಗದಲ್ಲಿ ಬರೋಬರಿ 41ವರ್ಷಗಳಿಂದ ನಿರಂತವಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ..

ರಾಮಕೃಷ್ಣ ಅವರ ಸುದೀರ್ಘ ಜರ್ನಿಯಲ್ಲಿ ‘ಅಗ್ರಸೇನಾ’ ಚಿತ್ರ ಒಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ‘ಅಗ್ರಸೇನಾ‘ ಚಿತ್ರ ರಾಮಕೃಷ್ಣ ಅಭಿನಯದ 200ನೇ ಚಿತ್ರವಾಗಿದೆ.. ನವ ನಿರ್ದೇಶಕ ಮುರುಗೇಶ್ ನಿರ್ದೇಶನದ ‘ಅಗ್ರಸೇನಾ’ಚಿತ್ರದಲ್ಲಿ ರಾಮಕೃಷ್ಣ ರೈತನ ಪಾತ್ರದಲ್ಲಿ ಕಾಣಿಸಿದ್ದಾರೆ..ಅಲ್ಲದೆ ಚಿತ್ರದಲ್ಲಿ ರಾಮಕೃಷ್ಣ ಎರಡು ಶೇಡ್​ ಗಳಲ್ಲಿ ನಟಿಸ್ತಿರೋದು ಮತ್ತೊಂದು ಹೈಲೆಟ್ ಆಗಿದೆ…

ಅಗ್ರಸೇನಾ ತಂದೆ ಮಗನ ಬಾಂದವ್ಯದ ಚಿತ್ರವಾಗಿದ್ದು, ಯವ್ವನದ ಹಾಗೂ ಮುಪ್ಪಿನ ಎರಡು ಶೇಡ್​ಗಳಲ್ಲಿ ರಾಮಕೃಷ್ಣ ನಟಿಸಿದ್ದಾರಂತೆ..ನಿರ್ದೇಶಕ ಹರ್ಷ ಗರಡಿಯಲ್ಲಿ ಪಳಗಿರುವ ಮುರುಗೇಶ್ ಚಿತ್ರದ ಕತೆ ರೆಡಿಯಾದ ಮೇಲೆ ಈ ಪಾತ್ರದಲ್ಲಿ ರಾಮಕೃಷ್ಣ ಅವರು ಕಾಣಿಸಿದ್ರೆ ಉತ್ತಮ ಎಂದು ನಿರ್ಧರಿಸಿ, ರೈತನ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದಾರೆ..

ಮುರುಗೇಶ್, ನಿರ್ದೇಶಕ
ಅಗ್ರಸೇನಾ ಚಿತ್ರ ಈಗಾಗಲೇ ಬಹುತೇಕ ಶುಟಿಂಗ್ ಕಂಪ್ಲೀಟ್​ ಆಗಿದ್ದು, ಇನ್ನೋಂದು ಹಾಡಿನ ಚಿತ್ರೀಕರಣ ಬಾಕಿ ಇದ್ದು, ದೊಡ್ಡ ಮಟ್ಟದಲ್ಲಿ ಈ ಈ ಹಾಡನ್ನು ಶೂಟಿಂಗ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.. ಇನ್ನು ಈ ಚಿತ್ರವನ್ನು ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಜಯರಾಮ್​ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..ಇನ್ನು ನಿರ್ಮಾಪಕರು ಕೊರೊನ ಅಲೆಗಳ ಅರ್ಭಟ ಕಮ್ಮಿ ಆಗ್ತಿದಂತೆ ಆಗ್ರಸೇನಾ ಚಿತ್ರವನ್ನು ರಿಲೀಸ್​ ಮಾಡುವ ಅಲೋಚನೆಯಲ್ಲಿದ್ದಾರೆ..

Source: newsfirstlive.com Source link