ಪೂಜೆ ವೇಳೆ ಆನಂದ್​ಸಿಂಗ್​ ಮೊಬೈಲ್​​ ನೋಡ್ತಿದ್ದು ಯಾಕೆ? ಸಿಎಂರಿಂದ ಸಚಿವರಿಗೆ ಬಂತಾ ಕಾಲ್​?

ಪೂಜೆ ವೇಳೆ ಆನಂದ್​ಸಿಂಗ್​ ಮೊಬೈಲ್​​ ನೋಡ್ತಿದ್ದು ಯಾಕೆ? ಸಿಎಂರಿಂದ ಸಚಿವರಿಗೆ ಬಂತಾ ಕಾಲ್​?

ವಿಜಯನಗರ: ಸಿಎಂ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಿರೀಕ್ಷಿತ ಖಾತೆ ಸಿಗಲಿಲ್ಲ ಅಂತಾ ಸಚಿವ ಆನಂದ್‌ ಸಿಂಗ್ ಸಿಡಿದೆದ್ದಿದ್ದಾರೆ. ತಮಗೆ ಕೇಳಿದ್ದ ಖಾತೆ ಸಿಗಲಿಲ್ಲ ಅಂತಾ ರಾಜೀನಾಮೆಗೂ ಸಿದ್ಧರಾಗಿದ್ದಾರೆ. ಜೊತೆಗೆ ಕಾದು ನೋಡುವ ತಂತ್ರಕ್ಕೂ ಮುಂದಾಗಿದ್ದಾರೆ. ಇದೀಗ ಖಾತೆ ಬಗ್ಗೆ ಕ್ಯಾತೆ ತೆಗೆದಿರೋ ಆನಂದ್ ಸಿಂಗ್‌ ಒಂದೊಂದಾಗಿ ತಮ್ಮ ಅಸ್ತ್ರಗಳನ್ನ ಸಿದ್ಧಗೊಳಿಸುತ್ತಿದ್ದಾರೆ.

blank

ಇಂದು ಕುಟುಂಬ ಸಮೇತವಾಗಿ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಪೂಜೆಯಲ್ಲಿ ತೊಡಗಿದ ಅವರು ಕಳೆದ ಒಂದು ಗಂಟೆಯಿಂದ ಪೂಜೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಪ್ರಬಲ ಖಾತೆ ಸಿಗದಿದ್ದಕ್ಕೆ ಮುನಿಸು; ಕಚೇರಿಯ ಬೋರ್ಡ್​ ತೆರವುಗೊಳಿಸಿದ ಆನಂದ್​ಸಿಂಗ್

ಹೊಸಪೇಟೆ ನಗರದಲ್ಲಿರೋ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಸುತ್ತಿರುವ ಅವರಿಗೆ ಪತ್ನಿ ಲಕ್ಷ್ಮಿ ಸಿಂಗ್, ಮಗ ಸಿದಾರ್ಥ ಸಿಂಗ್ ಪುತ್ರಿ ವೈಷವಿ ‌ಸೇರಿದಂತೆ ಹಲವರು ಜೊತೆಯಾಗಿದ್ದು, ಹೋಮ ಹವನ, ಗೋ ಪೂಜೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯುತ್ತಿರುವದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

blank

ಈ ಹಿಂದೆ ಸಮಿಶ್ರ ಸರ್ಕಾರದ ಸಮಯದಲ್ಲಿ ಕಾಂಗ್ರೆಸ್ ಶಾಸಕ ಸ್ಥಾನ ರಾಜೀನಾಮೆ ಸಲ್ಲಿಸುವ ಮುನ್ನವೂ ಪೂಜೆ ನೇರವಿಸಿ ಬಳಿಕ ರಾಜೀನಾಮೆ ನೀಡಿದ್ದ ಸಚಿವ ಆನಂದ‌ಸಿಂಗ್. ಸದ್ಯ ಕಳೆದೆರಡು ದಿನಗಳಿಂದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

blank

ಇನ್ನೂ ಪೂಜೆ ವೇಳೆಯಲ್ಲಿ ಆನಂದ್​ಸಿಂಗ್​ ಪದೇ ಪದೇ ಮೊಬೈಲ್​ ವೀಕ್ಷಣೆ ಮಾಡುತ್ತಿದ್ದು, ಸಚಿವರಿಗೆ ಸಿಎಂ ಕಡೆಯಿಂದ ಪೋನ್ ಕಾಲ್ ಬಂತಾ? ಎಂಬ ಅನುಮಾನಗಳು ದಟ್ಟವಾಗಿವೆ. ಪುತ್ರಿ ವೈಷವಿ ಬಳಿ ಇದ್ದ ಮೊಬೈಲ್​ನ್ನು ಕಾಲ್​ ಬಂದ ತಕ್ಷಣ ನೋಡುತ್ತಿದ್ದ ಆನಂದಸಿಂಗ್​ ಕಾಲ್​ ಸ್ವೀಕರಿಸದೇ ಮತ್ತೆ ಮಗಳ ಕಡೆ ವಾಪಾಸ್​ ನೀಡುತ್ತಿದ್ದದ್ದು ಕಂಡು ಬಂದಿದೆ.

ಇದನ್ನೂ ಓದಿ: ಆನಂದ್ ಸಿಂಗ್ ಅಸಮಾಧಾನ: ‘ಆಗಸ್ಟ್ 15 ರವರೆಗೆ ಸುಮ್ಮನಿರಿ’ ಅಂದಿದ್ದಾರಂತೆ ಸಿಎಂ ಬೊಮ್ಮಾಯಿ

 

Source: newsfirstlive.com Source link