ಮೂರು ವರ್ಷದ ಹಿಂದೆ ನಡೆದ ಕೊಲೆಗೆ ಮತ್ತೊಬ್ಬ ಬಲಿ

ಹಾಸನ: ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ನವಾಜ್ (27) ಕೊಲೆಯಾದ ದುರ್ದೈವಿಯಾಗಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೆಹಳ್ಳಿ ಸಮೀಪ ಕೊಲೆ ನಡೆದಿದೆ.  ಇದನ್ನೂ ಓದಿ:  ಸುಮಲತಾ ಅಂಬರೀಶ್ ಯಾವ ಕೆಲಸವನ್ನು ಮಾಡುತ್ತಿಲ್ಲ: ರವೀಂದ್ರ ಶ್ರೀಕಂಠಯ್ಯ

ಕೊಲೆಗೆ ಕಾರಣ:
ಮೂರು ವರ್ಷಗಳ ಹಿಂದೆ ಮೀನು ಹಿಡಿಯುವ ಸಂಬಂಧ ಎರಡು ಯುವಕರ ತಂಡದ ನಡುವೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಆಂಬುಲೆನ್ಸ್ ಚಾಲಕ ಅರುಣ್ ಎಂಬುವನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ, ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು.

ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಬೇಲ್ ಪಡೆದು ನಗರದಲ್ಲಿ ಮತ್ತೆ ಕೆಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು. ಅರುಣ್ ಕಡೆಯ ಹುಡುಗರೆ ಈತನ ಕೊಲೆ ಮಾಡಿರಬಹುದು ಎಂಬ ಶಂಕೆ ಪೊಲೀಸರದ್ದು. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಆರೋಪಿಗಳ ಹೆಡೆಮುರಿಕಟ್ಟಲು ಎರಡು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

Source: publictv.in Source link