‘ನಾನು ಈಗಲೂ ಗಟ್ಟಿಮುಟ್ಟು’ ಆರೋಗ್ಯದ ಗುಟ್ಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ

‘ನಾನು ಈಗಲೂ ಗಟ್ಟಿಮುಟ್ಟು’ ಆರೋಗ್ಯದ ಗುಟ್ಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು 75ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ವೇಳೆ ತಮ್ಮ ಆರೋಗ್ಯದ ಗುಟ್ಟನ್ನು ಮಾಧ್ಯಮಗಳ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹುಟ್ಟುಹಬ್ಬವನ್ನು ನಾನು ಹಿಂದೆನೂ ಆಚರಣೆ ಮಾಡಿಕೊಂಡಿಲ್ಲ, ಮುಂದೇನು ಆಚರಣೆ ಮಾಡಿಕೊಳ್ಳೋದಿಲ್ಲ. ನಾನು ಇವತ್ತು ಮೈಸೂರಿನಲ್ಲಿ ಇರೋದಕ್ಕೆ ಅಭಿಮಾನಿಗಳು ವಿಶ್ ಮಾಡೋದಕ್ಕೆ ಬಂದಿದ್ದಾರೆ.

ನನ್ನ ಹುಟ್ಟಿದ ದಿನಾಂಕ, ನಮ್ಮ ಅಪ್ಪ ನಮ್ಮ ಶಿಕ್ಷಕರಿಗೂ ಗೊತ್ತಿಲ್ಲ. ನನ್ನ ಸ್ಕೂಲ್ ದಿನಾಂಕ ಪ್ರಕಾರ 74 ತುಂಬಿ 75 ಕ್ಕೆ ಕಾಲಿರಿಸಿದ್ದೀನಿ. ನಾನು ಎಷ್ಟು ವರ್ಷ ಇರ್ತಿವಿ ಅನೋದು ಮುಖ್ಯವಲ್ಲ. ಯಾವು ರೀತಿ ಇರ್ತಿವಿ ಅನೋದು ಮುಖ್ಯ. ನಾನು ಈ ಹಿಂದೆ ಸಿಗರೇಟ್ ಸೇದುತ್ತಿದೆ. ಇದರಿಂದ ಹೃದಯ ನಾಳದಲ್ಲಿ ಬ್ಲಾಕ್ ಆಗಿತ್ತು. ನನಗೆ ಹೃದಯದಲ್ಲಿ ಸ್ಟೆಂಟ್​​​ ಹಾಕಿದ್ರು. ಅದನ್ನು ಹೊರತುಪಡಿಸಿದರೆ ನನಗೆ ಬೇರಾವುದೇ ಗಂಭೀರ ಕಾಯಿಲೆಗಳಿಲ್ಲ. ಡಯಾಬಿಟಿಸ್ ಬಂದರೆ ಬೇರೆ ಬೇರೆ ಖಾಯಿಲೆಗಳು ಬರುತ್ತವೆ. ನನಗೆ ಡಯಾಬಿಟಿಕ್ ಬಂದರೂ ಎಚ್ಚರಿಕೆ ವಹಿಸಿದ್ದರಿಂದ ನನ್ನ ಆರೋಗ್ಯ ಈಗಲೂ ಉತ್ತಮವಾಗಿದೆ. ಈಗ ನಾನು ಆರೋಗವಾಗಿದ್ದೇನೆ. ಕೆಲಸ ಮಾಡುತ್ತಿದ್ದೇನೆ. ಬೇರೆ ಯಾವುದನ್ನು ನಾನು ತಲೆಗೆ ಹಾಕಿಕೊಳ್ಳೋದಿಲ್ಲ ಎಂದು ತಮ್ಮ ಆರೋಗ್ಯದ ಹಿಂದಿನ ಗುಟ್ಟನ್ನು ಬಿಚ್ಚಿಟ್ಟರು.

Source: newsfirstlive.com Source link