ತೆಲೆ ಮೇಲೆ ಅಕ್ಕಿ ಚೀಲ ಹೊತ್ತ ಮಾಜಿ ಸಚಿವ ಸಂತೋಷ್​ ಲಾಡ್ ಮಾಡಿದ್ದೇನು?

ತೆಲೆ ಮೇಲೆ ಅಕ್ಕಿ ಚೀಲ ಹೊತ್ತ ಮಾಜಿ ಸಚಿವ ಸಂತೋಷ್​ ಲಾಡ್ ಮಾಡಿದ್ದೇನು?

ಧಾರವಾಡ: ಮಾಜಿ ಸಚಿವ ಸಂತೋಷ್​ ಲಾಡ್​ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ವತಃ ತಾವೇ 75 ಕೆಜಿ ಭಾರದ ಅಕ್ಕಿ ಚೀಲಗಳನ್ನು ಅನ್​ಲೋಡ್​ ಮಾಡಿ ಸರಳತೆ ಮೆರೆದಿದ್ದಾರೆ. ಕೋವಿಡ್ ಸಮಯದಲ್ಲಿ ಬಡ ಜನರಿಗೆ ಉಚಿತ ಅಕ್ಕಿ ವಿತರಣೆ ಮಾಡುತ್ತಿರುವ ಸಂತೋಷ್​ ಲಾಡ್ ಇಂದು ತಮ್ಮ ಕಲಘಟಗಿಯ ನಿವಾಸಕ್ಕೆ ಅಕ್ಕಿ ಚೀಲ ಹೊತ್ತ ಲಾರಿ ಆಗಮಿಸಿದ್ದು, ಇದನ್ನು ಅನ್​ಲೋಡ್​ ಮಾಡುವ ಸಂದರ್ಭದಲ್ಲಿ ಇತರ ಕಾರ್ಮಿಕರಿಗೆ ನೆರವಾದ ಅವರು ತಾವು ಕೂಡ ಅಕ್ಕಿ ಚೀಲಗಳನ್ನು ಹೊತ್ತು ಅನ್​ಲೋಡ್​ ಮಾಡುವಲ್ಲಿ ಸಹಕರಿಸಿದ್ದಾರೆ.

ಇನ್ನು ಮಾಜಿ ಸಚಿವ ಅಕ್ಕಿ ಚೀಲ ಹೊತ್ತು ಅನಲೋಡ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

Source: newsfirstlive.com Source link