ಉಡುಪಿಯಲ್ಲಿ ಕೊರೊನಾ ಹಾವಳಿ: 2 ಲಕ್ಷ 40 ಸಾವಿರ ಮಕ್ಕಳ ತಪಾಸಣೆ

ಉಡುಪಿಯಲ್ಲಿ ಕೊರೊನಾ ಹಾವಳಿ: 2 ಲಕ್ಷ 40 ಸಾವಿರ ಮಕ್ಕಳ ತಪಾಸಣೆ

ಉಡುಪಿ: ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನೂರರ ಆಸುಪಾಸಿನಲ್ಲಿ ಪಾಸಿಟಿವ್ ಕೇಸುಗಳು ಪತ್ತೆಯಾಗ್ತಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.

ಇನ್ನು ಮೂರನೇ ಅಲೆ ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ವಾತ್ಸಲ್ಯ ಮಕ್ಕಳ ತಪಾಸಣೆ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 2,40,000 ಮಕ್ಕಳ ತಪಾಸಣೆ ನಡೆಸಲಾಗುತ್ತಿದೆ, ಮೂರನೇ ಅಲೆ ಮಕ್ಕಳಿಗೆ ಡೇಂಜರ್​ ವರದಿ ಬೆನ್ನಲ್ಲೇ ಮುಂಜಾಗೃತ ಕ್ರಮವಾಗಿ ಮಕ್ಕಳ ತಜ್ಞರ ಸಭೆ ಮಾಡಿದ್ದೇವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

blank

ಇದನ್ನೂ ಓದಿ: ಕೇರಳಕ್ಕೆ ಹತ್ತರ ಕುತ್ತು.. ಸೋಂಕಿತರಿಗೂ ಸೋಂಕು; ಕರ್ನಾಟಕಕ್ಕೂ ಆತಂಕ ತಂದಿರೋ ದೇವರ ನಾಡು

ಜಿಲ್ಲೆಯಲ್ಲಿನ ಅಪೌಷ್ಠಿಕ ಮಕ್ಕಳಿಗೆ ಫುಡ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ 50 ಐಸಿಯು ಬೆಡ್​ವುಳ್ಳ ಕೇರ್​ ಸೆಂಟರ್​ಗಳನ್ನು ಹೆಚ್ಚಿಸಲು ನಿರ್ಮಿತಿ ಕೇಂದ್ರಕ್ಕೆ ಆದೇಶ ಮಾಡಲಾಗಿದೆ. ಮತ್ತು ಜಿಲ್ಲೆಯಲ್ಲಿ ನಾಲ್ಕು ಹೊಸ ಆಕ್ಸಿಜನ್ ಪ್ಲಾಂಟ್ ತಿಂಗಳಾಂತ್ಯಕ್ಕೆ ಸಿದ್ದವಾಗುತ್ತಿದ್ದು, ಪೀಡಿಯಾಟ್ರಿಕ್ ವೆಂಟಿಲೇಟರ್ ಖರೀದಿ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್​ ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

Source: newsfirstlive.com Source link