ನನ್ನ ರಾಜಕೀಯ ಜೀವನ ಶುರುವಾಗಿದ್ದು ಇಲ್ಲಿ, ಇಲ್ಲಿಂದಲೇ ಅಂತ್ಯವಾಗಬಹುದು -ಆನಂದ್ ಸಿಂಗ್

ನನ್ನ ರಾಜಕೀಯ ಜೀವನ ಶುರುವಾಗಿದ್ದು ಇಲ್ಲಿ, ಇಲ್ಲಿಂದಲೇ ಅಂತ್ಯವಾಗಬಹುದು -ಆನಂದ್ ಸಿಂಗ್

ಬಳ್ಳಾರಿ: ನನ್ನ ರಾಜಕೀಯ ಜೀವನ ಎಲ್ಲಿಂದ ಆರಂಭವಾಗಿದೆಯೋ ಅಲ್ಲಿಂದಲೇ ಅಂತ್ಯವಾಗಬಹುದು ಅಂತಾ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಖಾತೆಯನ್ನ ಸಿಎಂ ಬೊಮ್ಮಾಯಿ ಅವರು ನೀಡಿರೋದಕ್ಕೆ ಅಸಮಾಧಾನಗೊಂಡಿರುವ ಆನಂದ್​ ಸಿಂಗ್ ಇಂದು ದೇವರ ಪೂಜೆಯಲ್ಲಿ ಬ್ಯುಸಿ ಆಗಿದ್ದರು. ಬೆಳಗ್ಗೆಯಿಂದ ದೇವರ ಪೂಜಾ ಕೈಂಕಾರ್ಯದಲ್ಲಿ ತೊಡಗಿದ್ದರು. ತಮ್ಮ ಆರಾಧ್ಯ ಹಾಗೂ ನಂಬುಗೆಯ ದೇವರಾದ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಬಂತು ವಿಶೇಷ ಪೂಜೆ ನೆರವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

blank

ಟೀಕೆ ಮಾಡಬೇಕು ಅಂದ್ರೆ ನನಗೆ ಬರಲ್ಲ, ಈ ಬಗ್ಗೆ ನನಗೆ ಬಹಳಷ್ಟು ಅಭ್ಯಾಸ ಇಲ್ಲ. ನನ್ನ ರಾಜಕೀಯ ಜೀವನ ಇಲ್ಲಿಂದ ಆರಂಭವಾಗಿದೆ. ನನ್ನ ರಾಜಕೀಯ ಜೀವನ 2008ರಲ್ಲಿ ಶುರುವಾಗಿತ್ತು. ಆ ಸ್ಥಳ ಇದೇ ವೇಣುಗೋಪಾಲಸ್ವಾಮಿಯ ಸನ್ನಿಧಿಯಿಂದ. ಇಲ್ಲಿಂದ ಆರಂಭವಾಗಿರುವ ನನ್ನ ರಾಜಕೀಯ ಜೀವನ ಇಲ್ಲಿಂದಲೇ ಅಂತ್ಯ ಆಗಲೂಬಹುದು. ಗೋಪಾಲಕೃಷ್ಣನ ಕೃಪೆ ಇದ್ದರೆ ಪುನಃ ಆರಂಭವಾಗಬಹುದು. ಎಲ್ಲವೂ ಪರಮಾತ್ಮ ಕೃಷ್ಣನ ಕೈಯಲ್ಲಿದೆ ಅಂತಾ ಭಾವಿಸಿದ್ದೇನೆ ಎಂದರು.

ಅಲ್ಲದೇ ನಾಳೆ ಬೆಳಗ್ಗೆ ಸಿಎಂ ಅವರು ಬರಲು ಹೇಳಿದ್ದಾರೆ. ಬೆಂಗಳೂರಿಗೆ ಹೋಗಿ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಅಲ್ಲಿಯವರೆಗೂ ರಾಜಕೀಯವಾಗಿ ಯಾವುದೇ ಹೇಳಿಕೆಯನ್ನ ನೀಡುವುದಿಲ್ಲ ಎಂದರು.

ಇದನ್ನೂ ಓದಿ: ಪೂಜೆ ವೇಳೆ ಆನಂದ್​ಸಿಂಗ್​ ಮೊಬೈಲ್​​ ನೋಡ್ತಿದ್ದು ಯಾಕೆ? ಸಿಎಂರಿಂದ ಸಚಿವರಿಗೆ ಬಂತಾ ಕಾಲ್​?

Source: newsfirstlive.com Source link