ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರನ್ನ ಅಮಾನತುಗೊಳಿಸಿದ ಎಸ್ಪಿ

ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರನ್ನ ಅಮಾನತುಗೊಳಿಸಿದ ಎಸ್ಪಿ

ವಿಜಯಪುರ: ಕರ್ತವ್ಯಲೋಪ ಹಿನ್ನೆಲೆ ಐವರು ಪೊಲೀಸರ ಮೇಲೆ ಖಡಕ್​ ಕ್ರಮ ತೆಗೆದುಕೊಂಡಿರುವ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ.

ಜಿಲ್ಲೆಯ ಎಸ್ಪಿ ಆನಂದ್ ಕುಮಾರ್ ಕರ್ತವ್ಯ ಲೋಪ ಎಸಗಿದ ಪೊಲೀಸರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದು, ಅಮಾನತು ಮಾಡಿದ್ದಾರೆ. ನಿಡಗುಂದಿ ಠಾಣೆಯ ಇಬ್ಬರು, ಬಸವನ ಬಾಗೇವಾಡಿಯ ಮೂವರು ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಲು ಎಸ್ಪಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ವಿಜಯಪುರಕ್ಕೂ ಕಾಲಿಟ್ಟಿದ್ದ ಡೆಲ್ಟಾ ರೂಪಾಂತರಿ -280 ಮಂದಿ ಸೋಂಕಿಗೆ ಬಲಿಯಾಗಿರೋ ಶಂಕೆ

ನಿಡಗುಂದಿ ಠಾಣೆಯ ಎಸ್.ಸಿ. ರೆಡ್ಡಿ ಸಿಪಿಸಿ 496 ಹಾಗೂ ಐ.ಜಿ. ಹೊಸಗೌಡರ ಸಿಪಿಸಿ 1666 ಮತ್ತು ಬಸವನ ಬಾಗೇವಾಡಿಯ ಐ.ಎಂ. ಮಕಾಂದಾರ ಸಿಪಿಸಿ 1560, ಆರ್.ಎಲ್. ರಾಠೋಡ ಸಿಪಿಸಿ 568, ಹಾಗೂ ಎಂ.ಎಂ. ಯಾಳಗಿ ಸಿಎಚ್ ಸಿ 1327 ಅಮಾನತುಗೊಂಡವರು. ಕರ್ತವ್ಯದಲ್ಲಿ ಲೋಪ ಮತ್ತು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಎಸ್ಪಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

 

Source: newsfirstlive.com Source link