ನ್ಯೂಸ್​ಫಸ್ಟ್​ ವರದಿಗೆ ಎಚ್ಚೆತ್ತ ಶಾಸಕ; 10 ದಿನದಲ್ಲಿ ‘ಹಾಗೆ’ ಮಾಡೇ ಮಾಡ್ತೀನಿ ಅಂತ ಭರವಸೆ

ನ್ಯೂಸ್​ಫಸ್ಟ್​ ವರದಿಗೆ ಎಚ್ಚೆತ್ತ ಶಾಸಕ; 10 ದಿನದಲ್ಲಿ ‘ಹಾಗೆ’ ಮಾಡೇ ಮಾಡ್ತೀನಿ ಅಂತ ಭರವಸೆ

ಕೋಲಾರ: ಜಿಲ್ಲೆಯ ಗಡಿಭಾಗದಲ್ಲಿರುವ ಮಲ್ಲೇಶನಪಾಳ್ಯಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಗ್ರಾಮದ ಸಮಸ್ಯೆಗಳ ಕುರಿತು ಪರೀಶೀಲನೆ ನಡೆಸಿ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಭರವಸೆ ನೀಡಿದ್ದಾರೆ.

ಬಂಗಾರಪೇಟೆ ತಾಲೂಕಿನ ಮಲ್ಲೇಶನಪಾಳ್ಯ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಇತ್ತೀಚೆಗೆ ನ್ಯೂಸ್​ಫಸ್ಟ್​ ವರದಿ ಬಿತ್ತರಿಸಿತ್ತು. ಈ ವೇಳೆ ಗ್ರಾಮದ ಸತೀಶ್​ ಎಂಬ ಯುವಕ ಗ್ರಾಮದ ಸಮಸ್ಯೆಗಳನ್ನು ನೆನೆದು ನ್ಯೂಸ್​ಫಸ್ಟ್​ನ ಮುಂದೆ ತನ್ನ ಅಳಲು ತೋಡಿಕೊಂಡು ಕಣ್ಣಿರು ಹಾಕಿದ್ದ.

blank

ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧಿಕಾರಿಗಳ ಜೊತೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿ  ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ್ದು, ಹತ್ತು ದಿನಗಳಲ್ಲಿ ಶಾಲೆ, ರಸ್ತೆ, ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.

Source: newsfirstlive.com Source link