‘ಕಲಿ’ ಜೊತೆ ಯುದ್ಧಕ್ಕೆ ಹೊರಟ್ರಾ ಜೋಗಿ ಪ್ರೇಮ್? ಸ್ಕ್ರಿಪ್ಟ್ ಪೂಜೆ ಮಾಡಿ ಸದ್ದು ಮಾಡಿದ ಶೋ ಮ್ಯಾನ್

‘ಕಲಿ’ ಜೊತೆ ಯುದ್ಧಕ್ಕೆ ಹೊರಟ್ರಾ ಜೋಗಿ ಪ್ರೇಮ್? ಸ್ಕ್ರಿಪ್ಟ್ ಪೂಜೆ ಮಾಡಿ ಸದ್ದು ಮಾಡಿದ ಶೋ ಮ್ಯಾನ್

ಅದೇನೋ ಗೊತ್ತಿಲ್ಲಪ್ಪ.. ಜೋಗಿ ಪ್ರೇಮ್ ಯಾವುದೇ ಸಿನಿಮಾ ಮಾಡ್ಲಿ ಆ ಸಿನಿಮಾ ಸೌಂಡ್ ಮಾಡುತ್ತೆ.. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಮುಂದಿನ ಸಿನಿಮಾದ ಬಗ್ಗೆ ಇನ್ನೂ ಕೂಡ ಶ್ರೀಕಾರ, ಓಂಕಾರ ಹಾಕೋ ಮೊದ್ಲೇ ಹೊಸ್ ಹೊಸ ವೆರೈಟಿ ವೆರೈಟಿ ಸಮಾಚಾರಗಳು ಹೊರ ಬರುತ್ತಿವೆ.. ಶಿವಣ್ಣ ಮತ್ತು ಕಿಚ್ಚ ಸುದೀಪ್​​ ಅವರಿಗೆ ಮಾಡಿದೊಂದು ಸಬ್ಜೆಕ್ಟ್​ ಅನ್ನ ಧ್ರುವಗೆ ಮಾಡ್ತಿದ್ದಾರಂತೆ ಪ್ರೇಮ್​​..!

ಏಕ್​ ಲವ್​ ಯಾ ಚಿತ್ರದ ನಂತ್ರ ನಿರ್ದೇಶಕ ಜೋಗಿ ಪ್ರೇಮ್​ ನಡೆಯೇನು..? ಯಾವ ಸ್ಟಾರ್​ ಜೊತೆ ಪ್ರೇಮ್ ಸಿನಿಮಾ ಮಾಡ್ತಾರೆ..? ಎಂಬ ಚರ್ಚೆ ಗಾಂಧಿನಗರದಲ್ಲಿ ಈಗಾಗಲೇ ಶುರುವಾಗಿದೆ. ಈ ಗ್ಯಾಫ್​ನಲ್ಲಿ ಪ್ರೇಮ್ ಸ್ಟಾರ್ ನಟನೊಂದಿಗೆ ಚಿತ್ರ ಮಾಡ್ತಾರೆ ಅನ್ನೋ ವಿಷಯ ಟಾಕ್​ ಆಪ್​ ದಿ ಟೌನ್​ ಆಗಿದೆ.

ಏಕ್​ ಲವ್​ ಯಾ ಚಿತ್ರ ಮುಗಿಸಿ ಪ್ರೇಮ್​ ಕಿಚ್ಚ ಸುದೀಪ್​ ಜೊತೆ ಚಿತ್ರಯಾತ್ರೆ ಹೋಗ್ತಾರೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಅಲ್ಲದೆ ಈ ಸಿನಿಮಾ ಕಿಚ್ಚ ಸುದೀಪ್​ ಹುಟ್ಟು ಹಬ್ಬಕ್ಕೆ ರಿವೀಲ್​ ಆಗುತ್ತೆ ಅನ್ನೋ ಮಾತಿತ್ತು. ಆದ್ರೆ ಈಗ ಸದ್ದಿಲ್ಲದೆ ಮತ್ತೊಂದು ಸುದ್ದಿಯೊಂದು ಪ್ರೇಮ್​ ಅಂಗಳದಿಂದ ಬಂದಿದೆ. ಅದೇನಪ್ಪ ಅಂದ್ರ ಪ್ರೇಮ್​ ನಟ ಧ್ರುವ ಸರ್ಜಾ ಚಿತ್ರಕ್ಕೆ ನಿರ್ದೇಶನ ಮಾಡ್ತಾರಂತೆ ಇದು ಪ್ರೇಮ್ ಸಿನಿ ಜಿಂದಗಿಯ 9ನೇ ಸಿನಿಮಾ.

blank

ಧ್ರುವ ಜೊತೆ ಯುದ್ಧಕ್ಕೆ ಸಿದ್ಧವಾದ್ರಾ ದಿ ಶೋ ಮ್ಯಾನ್..?
ನಟ ಧ್ರುವ ಸರ್ಜಾ ಎ.ಪಿ.ಅರ್ಜುನ್ ಜೊತೆ ಹೊಸ ಸಿನಿಮಾಕ್ಕೆ ಸಿದ್ಧವಾಗಿ ನಿಂತಿದ್ದಾರೆ.. ಈ ಗ್ಯಾಪ್​ನಲ್ಲಿ ಜೋಗಿ ಪ್ರೇಮ್ ಜೊತೆ ಧ್ರುವ ಸಿನಿಮಾ ಮಾಡೋದು ಕನ್ಫರ್ಮ್ ಎನ್ನುತ್ತಿದೆ ಮೂಲಗಳು.. ಸ್ಕ್ರಿಪ್ಟ್ ಪೂಜೆ ಮಾಡಿ ನಾನು ಯುದ್ಧಕ್ಕೆ ಸಿದ್ಧ ಅನ್ನೋ ಕರೆಯನ್ನ ವಿಡಿಯೋ ಮೂಲಕ ಸಾರಿದ್ದಾರೆ ಶೋ ಮ್ಯಾನ್. ಅಷ್ಟಕ್ಕೂ ಯಾವ ಕಥೆಯನ್ನ ನಿರ್ದೇಶಕ ಪ್ರೇಮ್ ನಟ ಧ್ರುವ ಸರ್ಜಾಗಾಗಿ ಸಿನಿಮಾ ಮಾಡಲು ಹೊರಟ್ಟಿದ್ದಾರೆ ಅನ್ನೋದೆ ಬ್ಯೂಟಿಫುಲ್ ಸೀಕ್ರೆಟ್..

blank

ಈ ಹಿಂದೆ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನಲ್ಲಿ ದಿ ವಿಲನ್ ಸಿನಿಮಾ ತೆರೆಕಂಡಿತ್ತು. ಆದ್ರೆ ದಿ ವಿಲನ್ ಸಿನಿಮಾಕ್ಕೂ ಮುನ್ನ ಕಲಿ ಎಂಬುವ ಸಿನಿಮಾವನ್ನ ಅದ್ಧೂರಿ ಬಜೆಟ್​ನಲ್ಲಿ ಮಾಡಲು ಹೊರಟ್ಟಿದ್ದರು ಪ್ರೇಮ್​. ಕೊನೆ ಮುಮೆಂಟ್​​​ನಲ್ಲಿ ನಾನಾ ಕಾರಣಗಳಿಂದ ‘ಕಲಿ’ ಪ್ರಾಜೆಕ್ಟ್ ಡ್ರಾಪ್ ಆಯ್ತು. ದಿ ವಿಲನ್ ಸಿನಿಮಾ ಸೆಟ್ಟೇರಿತು. ಈಗ್ಯಾಕೆ ವಿಚಾರ ಅನ್ನೋದನ್ನ ಬಿಡಿಸಿ ಹೇಳ್ತಿವಿ ಕೇಳಿ..

ಕಿಚ್ಚ- ಶಿವಣ್ಣನ ಕಲಿ ಕಥೆಯನ್ನ ಧ್ರುವಗೆ ಮಾಡ್ತಾರಾ ಪ್ರೇಮ್..?
ಯೆಸ್​.. ಇಂಥದೊಂದು ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ಕಲಿ ಅನ್ನೋ ಬಿಗ್ ಬಜೆಟ್ ಸಿನ್ಮಾವನ್ನ ಜೋಗಿ ಪ್ರೇಮ್ ಮಾಡಲು ಹೊರಟಿದ್ರು. ಆದ್ರೆ ಆ ಸಿನಿಮಾ ಮಾಡಲು ಆಗದೆ ಇದ್ದಾಗ ಬೇಸರವು ಆಗಿದ್ರು. ಆದರೆ ಈಗ ಶಿವಣ್ಣ- ಕಿಚ್ಚನಿಗೆ ಮಾಡಿಕೊಂಡಿದ್ದ ಕಲಿ ಸಿನಿಮಾದ ಕಥೆಯನ್ನ ಆಲ್ಟ್ರು ಮಾಡಿ ಪ್ರೇಮ್ ಸಿನಿ ಯುದ್ಧಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ.

blank

ಪ್ರೇಮ್ ಅವರ ಹೊಸ ಸಿನಿಮಾದ ಅಧಿಕೃತ ಮಾಹಿತಿ ಈ ತಿಂಗಳ 10ನೇ ತಾರೀಖ್​​ನ ನಂತರ ಹೊರ ಬರಲಿದೆ.. ಜೋಗಿ ಪ್ರೇಮ್ ನೆಕ್ಸ್ಟ್ ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಮಾಡ್ತಾರಾ ಅಥವಾ ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡ್ತಾರಾ ? ಒಂದು ವೇಳೆ ಧ್ರುವ ಸರ್ಜಾರಿಗೆ ಕಲಿ ಕಥೆಯನ್ನ ಮಾಡೋದ್ರಾದ್ರೆ ಯಾರು ಪ್ರೋಡ್ಯೂಸರ್ ಇತ್ಯಾದಿ ವಿಚಾರಗಳು ಶೀಘ್ರದಲ್ಲೇ ರಿವೀಲ್ ಆಗಲಿದೆ.

Source: newsfirstlive.com Source link