ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು -ಆದ್ರೆ ಧಾರವಾಡಕ್ಕೆ ಕಾಲಿಡುವಂತಿಲ್ಲ

ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು -ಆದ್ರೆ ಧಾರವಾಡಕ್ಕೆ ಕಾಲಿಡುವಂತಿಲ್ಲ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್​​ ಷರತ್ತು ಬದ್ಧ ರಾಜೀನಾಮೆ ಮಂಜೂರು ಮಾಡಿದೆ. ವಿನಯ್​ ಕುಲಕರ್ಣಿ ಅವರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ಮಂಜೂರು ಮಾಡಿದೆ. ವಿನಯ್ ಅವರ ಪರ ಖ್ಯಾತ ವಕೀಲ ಮುಕುಲ್ ರೋಹಟಗಿ, ಕಪಿಲ್ ಸಿಬಲ್, ಸಿದ್ದಾರ್ಥ ಅವರು ವಾದ ಮಂಡಿಸಿದ್ದರು.

ಕಳೆದ 9 ತಿಂಗಳಿನಿಂದ ಜೈಲಿನಲ್ಲಿರುವ ವಿನಯ್​ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಆದರೆ ಧಾರವಾಡಕ್ಕೆ ಹೋಗದಂತೆ ಸೂಚನೆ ನೀಡಿದೆ. ಅಲ್ಲದೇ ಸಿಬಿಐ ಅಧಿಕಾರಿ ಕರೆದಾಗಲೆಲ್ಲ ವಿಚಾರಣೆಗೆ ಸಹಕರಿಸಬೇಕು ಷರತ್ತು ವಿಧಿಸಿದೆ. ಇನ್ನು ವಿನಯ್ ಸೋದರಮಾವ ಚಂದ್ರಶೇಖರ ಇಂಡಿ ಪರ ವಕೀಲ ಕಾಮತ್​ ವಕಾಲತ್ತು ವಹಿಸಿದ್ದರು.

9 ತಿಂಗಳು 6 ದಿನಗಳ ಜೈಲು ವಾಸ ಇಂದಿಗೆ ಅಂತ್ಯವಾಗುತ್ತಾ..?

ಈ ಹಿಂದೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಜಾಮೀನು ತಿರಸ್ಕಾರ ಗೊಂಡಿರುವ ಹಿನ್ನೆಲೆ ವಿನಯ್ ಕುಲಕರ್ಣಿ ಅವರು, ಸುಪ್ರೀಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕಳೆದ 9 ತಿಂಗಳು 6 ದಿನಗಳಿಂದ ಜೈಲಿನಲ್ಲೇ ಇರುವ ವಿನಯ್ ಕುಲಕರ್ಣಿ ಅವರಿಗೆ ಕೊಲೆ ಪ್ರಕರಣದಲ್ಲಿ ಜಾಮೀನು ನೀಡಿದ್ದರೂ ಸಾಕ್ಷನಾಶ ಪ್ರಕರಣದ ಕಂಟಕ ಅವರಿಗೆ ಮುಂದುವರಿದಿದೆ. ಸಾಕ್ಷ್ಯ ನಾಶ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಮೊದಲ ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆಗುವುದು ಅನುಮಾನ ಎನ್ನಲಾಗಿದೆ.

Source: newsfirstlive.com Source link