ಭಾರತದ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ; ಸ್ವದೇಶಿ ತಂತ್ರಜ್ಞಾನವುಳ್ಳ ಕ್ರೂಸ್​ ಮಿಸೈಲ್​ ಪರೀಕ್ಷೆ ಯಶಸ್ವಿ 

ಭಾರತದ ಬತ್ತಳಿಕೆಗೆ ಮತ್ತೊಂದು ಕ್ಷಿಪಣಿ; ಸ್ವದೇಶಿ ತಂತ್ರಜ್ಞಾನವುಳ್ಳ ಕ್ರೂಸ್​ ಮಿಸೈಲ್​ ಪರೀಕ್ಷೆ ಯಶಸ್ವಿ 

ನವದೆಹಲಿ: ಡಿಆರ್​ಡಿಓ (Defence Research and Development Organisation) ಅಭಿವೃದ್ಧಿಪಡಿಸಿರುವ ಐಟಿಸಿಎಂ (Indigenous Technology Cruise Missile) ಕ್ಷಿಪಣಿ ಪರೀಕ್ಷೆಯನ್ನ ಒಡಿಶಾದ ಕಡಲ ಕಿನಾರೆಯಲ್ಲಿ ಭಾರತ ಯಶಸ್ವಿಯಾಗಿ ನಡೆಸಿದೆ.

ಸ್ವದೇಶಿ ಕ್ರೂಸ್​​ ಎಂಜಿನ್​​ನೊಂದಿಗೆ ಕ್ಷಿಪಣಿಯು 150 ಕೀಲೋ ಮೀಟರ್ ದೂರದ ಗಿರಿಯನ್ನ ಯಶಸ್ವಿಯಾಗಿ ಪೂರೈಸಿದೆ. ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವನ್ನ ಮತ್ತಷ್ಟು ಹೆಚ್ಚಿಸುವ ಇರಾದೆಯನ್ನ ಡಿಆರ್​ಡಿಒ ಹೊಂದಿದೆ. ಕಳೆದ ಜೂನ್​​ನಲ್ಲಿ ಭಾರತ ನ್ಯೂ ಜನರೇಷನ್ ನ್ಯೂಕ್ಲೀಯರ್ ಕೆಪಬಲ್ ಅಗ್ನಿ ಪ್ರೈಮ್ ಮಿಸೈಲ್​ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿತ್ತು. ಇದೀಗ ಐಟಿಸಿಎಂ ಕ್ಷಿಪಣಿ ಪರೀಕ್ಷೆಯನ್ನ ನಡೆಸಿದೆ. ಈ ಕ್ಷಿಪಣಿಯನ್ನ ನಿರ್ಭಯಾ ಯೋಜನೆಯಡಿ ಡಿಆರ್​ಡಿಓ ಅಭಿವೃದ್ಧಿಪಡಿಸಿದೆ.

 

 

Source: newsfirstlive.com Source link