ಸಿಗದ ಸಚಿವ ಸ್ಥಾನ; ದತ್ತಾತ್ರೇಯ ಸ್ವಾಮಿಯ ಮೊರೆ ಹೋದ್ರಾ ವಿಜಯೇಂದ್ರ?

ಸಿಗದ ಸಚಿವ ಸ್ಥಾನ; ದತ್ತಾತ್ರೇಯ ಸ್ವಾಮಿಯ ಮೊರೆ ಹೋದ್ರಾ ವಿಜಯೇಂದ್ರ?

ಕಲಬುರ್ಗಿ: ಒಂದು ಕಡೆ ಸಚಿವ ಆನಂದ್​ಸಿಂಗ್​ ನೀಡಿರುವ ಸಚಿವ ಸ್ಥಾನದ ವಿರುದ್ಧ ಅಸಮಾಧಾನ ಹೊರ ಹಾಕಿ ನನಗೆ ಆ ಖಾತೆ ಬೇಡ, ಈ ಖಾತೆ ಬೇಡ ಎನ್ನುತ್ತಿದ್ದರೆ ಇತ್ತ ಮಾಜಿ ಸಿಎಂ ಪುತ್ರ ಬಿ. ವೈ. ವಿಜಯೇಂದ್ರ ಸಚಿವ ಸ್ಥಾನ ಕೈ ತಪ್ಪಿದ್ದಕ್ಕಾಗಿ ಟೆಂಪಲ್​ ರನ್​ ನಡೆಸಿ ಸಚಿವ ಸ್ಥಾನ ಕರುಣಿಸುವಂತೆ ದೇವರಿಗೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ

blank

ಕ್ಯಾಬಿನೆಟ್​ನಲ್ಲಿ ಸಚಿವ ಸ್ಥಾನ ಕೈ ತಪ್ಪಿದ್ದಕ್ಕಾಗಿ ಇಂದು ಜಿಲ್ಲೆಯ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಪತ್ನಿ ಸಮೇತ ಭೇಟಿ ನೀಡಿದ ವಿಜಯೇಂದ್ರ ದೇವರ ಆಶೀರ್ವಾದ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಸಂಪುಟದಲ್ಲಿ ಮಂತ್ರಿಗಿರಿ ತಪ್ಪಿದ್ದಕ್ಕಾಗಿ, ಮಂತ್ರಿಗಿರಿ ಕರುಣಿಸುವಂತೆ ವಿಜಯೇಂದ್ರ ದತ್ತಾತ್ರೇಯನ ಮೊರೆ ಹೋಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಹರಿದಾಡ್ತಿದೆ..

blank

ಇದನ್ನೂ ಓದಿ: ನನ್ನ ರಾಜಕೀಯ ಜೀವನ ಶುರುವಾಗಿದ್ದು ಇಲ್ಲಿ, ಇಲ್ಲಿಂದಲೇ ಅಂತ್ಯವಾಗಬಹುದು -ಆನಂದ್ ಸಿಂಗ್

Source: newsfirstlive.com Source link