ರಾಮು ಅಗಲಿಕೆ ನೋವಲ್ಲಿರೋ ಮಾಲಾಶ್ರೀ; ಮಕ್ಕಳಿಂದ ಸಿಕ್ತು ಮುದ್ದಾದ ಉಡುಗೊರೆ

ರಾಮು ಅಗಲಿಕೆ ನೋವಲ್ಲಿರೋ ಮಾಲಾಶ್ರೀ; ಮಕ್ಕಳಿಂದ ಸಿಕ್ತು ಮುದ್ದಾದ ಉಡುಗೊರೆ

ಕನಸಿನ ರಾಣಿ ಎಂದೆ ಖ್ಯಾತರಾಗಿರೋ ನಟಿ ಮಾಲಾಶ್ರೀ ಮೊದಲ ಬಾರಿಗೆ ಪತಿ ರಾಮು ಅವರಿಲ್ಲದೆ ಬರ್ತ್​​ಡೇ ದಿನವನ್ನ ಆಚರಿಸಿದ್ದಾರೆ.. ಮಾಲಾಶ್ರೀ ಬರ್ತ್​ಡೇ ದಿನವನ್ನ ನೆನಪಿನಲ್ಲಿ ಉಳಿಯುವಂತೆ ಅವರ ಮಕ್ಕಳು ಮಾಡಿದ್ದಾರೆ.. ಬಘೀರ ಅನ್ನೋ ಹೆಸರಿನ ನಾಯಿ ಮರಿಯನ್ನ ಮಾಲಾಶ್ರೀ ಮಕ್ಕಳು ತನ್ನ ಅಮ್ಮನಿಗೆ ಗಿಫ್ಟ್ ರೂಪದಲ್ಲಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮಾಲಾಶ್ರೀ ಅವರು, ನನ್ನ ಹುಟ್ಟುಹಬ್ಬಕ್ಕೆ ಮಕ್ಕಳು ಪಿಟ್ಬುಲ್ ನಾಯಿಮರಿಯನ್ನು ಗಿಫ್ಟ್ ನೀಡಿದ್ದಾರೆ. ಬಘೀರ ಬೇಬಿಗೆ ಸ್ವಾಗತ ಎಂದು ಬರೆದುಕೊಂಡು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Source: newsfirstlive.com Source link